ಹಾಸನದಲ್ಲಿ ಕೆಮಿಕಲ್ ಲಾರಿಗೆ ಬೆಂಕಿ; ಮೂವರು ಸಜೀವ ದಹನ..!

Chemical Lorry
Published on

ಹಾಸನ: ಅರಕಲಗೂಡು ತಾಲೂಕಿನ ಬಸವನಹಳ್ಳಿ ಪಡುವಲಹಿಪ್ಪೆ ರಸ್ತೆ ತಿರುವಿನಲ್ಲಿ ಶನಿವಾರ ತಡರಾತ್ರಿ ವಿಷಕಾರಿ ರಾಸಾಯನಿಕ ಹೊತ್ತು ಸಾಗುತ್ತಿದ್ದ ಲಾರಿ ಉರುಳಿ ಬೆಂಕಿ ಹೊತ್ತಿ ಉರಿದು ಮೂವರು ಮೃತಪಟ್ಟಿದ್ದಾರೆ.

ತಾಲೂಕಿನ ಗೊರವನಹಳ್ಳಿ ಗ್ರಾಮದ ಲಾರಿ ಚಾಲಕ ಪುಟ್ಟರಾಜು ೪೨, ಪ್ರಮೋದ್ ೧೮, ಪರಮೇಶ್ ೪೦ ಸಾವಿಗೀಡಾದವರು.

ಮೈಸೂರಿನಿಂದ ಹಾಸನದ ಹಿಮತ್ ಸಿಂಗ್ ಬಟ್ಟೆ ಕಾರ್ಖಾನೆಗೆ ವಿಷಕಾರಿ ಪೌಡರ್ ಚೀಲಗಳು, ಕೆಮಿಕಲ್ ಬಾಕ್ಸ್ ಗಳನ್ನು ಹೊತ್ತು ಬರುತ್ತಿದ್ದ ಲಾರಿ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿ ಉರುಳಿ ಬಿದ್ದ ರಭಸಕ್ಕೆ ಬೆಂಕಿ ಹೊತ್ತಿ ಉರಿದಿದೆ. ಘಟನೆಯಿಂದಾಗಿ ಲಾರಿಯಡಿ ಇಬ್ಬರು ಸಿಲುಕಿ ಸಾವಿಗೀಡಾಗಿದ್ದಾರೆ.

ಲಾರಿಯಿಂದ ಕೆಳಕ್ಕೆ ಜಿಗಿದು ಗಾಯಗೊಡಿದ್ದ ಚಾಲಕನನ್ನು ರಾತ್ರಿಯೇ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ, ಇಂದು ಬೆಳಗ್ಗೆ ಹಾಸನ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಲಾರಿಯಡಿ ಸಿಲುಕಿದ್ದ ಇಬ್ಬರ ಮೃತದೇಹಗಳನ್ನು ಹೊರತೆಗೆಯಬೇಕಿದೆ. ಕೆಮಿಕಲ್ ದುರ್ವಾಸನೆ ಬೀರುತ್ತಿದ್ದ ಲಾರಿ ಹತ್ತಿರ ಜನರು ಸುಳಿಯಲು ಸಾಧ್ಯವಾಗುತ್ತಿಲ್ಲ, ಸ್ಥಳದಲ್ಲಿ ಅರಕಲಗೂಡು ಪೊಲೀಸರು ಮೊಕ್ಕಾಂ ಹೂಡಿದ್ದು ಮುಂಜಾಗ್ರತೆ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net