More

    ಈ ರಾಶಿಯವರು ಧೈರ್ಯದಿಂದ ಮುನ್ನುಗ್ಗಿದರೆ ಕಷ್ಟಗಳು ನಿವಾರಣೆ ಆಗುತ್ತವೆ: ವಾರಭವಿಷ್ಯ

    ಈ ರಾಶಿಯವರು ಧೈರ್ಯದಿಂದ ಮುನ್ನುಗ್ಗಿದರೆ ಕಷ್ಟಗಳು ನಿವಾರಣೆ ಆಗುತ್ತವೆ: ವಾರಭವಿಷ್ಯ

    ಮೇಷ

    ಮೇಷ-ವೃಶ್ಚಿಕ ಅಧಿಪತಿ ಅಂಗಾರಕ. ಅವನು ಅಗ್ನಿದೇವತೆಯೂ ಹೌದು. ಭೂಮಿ ದೇವನೂ ಹೌದು. ತಮಿಳುನಾಡಿನಲ್ಲಿ ವಿರಾಜಮಾನರಾಗಿರುವ ಸುಬ್ರಹ್ಮಣ್ಯನಿಗೆ ಏನು ಮಾಡಬೇಕೆಂದು ಜ್ಞಾಪಿಸಿಕೊಳ್ಳಿ. ಭೂಮಿಯಿಂದ ಬಂದ ಹಣದಲ್ಲಿ ಶೇಕಡ 20 ಭಾಗದಷ್ಟು ಗುರುಸೇವೆಗೆ ಇಡಬೇಕು. ಆರು ಕ್ಷೇತ್ರಗಳ ಸುಬ್ರಹ್ಮಣ್ಯನನ್ನು ಸಂದರ್ಶಿಸಿ, ಪಾರ್ವತಿಪುತ್ರನಾದ ಸ್ಕಂದನನ್ನು ಪೂಜಿಸಿ.

    ವೃಷಭ

    ಈ ರಾಶಿಯಲ್ಲೇ ರಾಹುವಿದ್ದಾನೆ. ಅಲ್ಲಿ ರಾಹು ಉಚ್ಚನೇನೋ ಹೌದು. ಕೊಡುವವನು, ಕೆಡಿಸುವವನು ಅವನೇ. ಎಚ್ಚರವಿರಲಿ. ನಮ್ಮ ನಡವಳಿಕೆಯಿಂದ ಪಾಪಗಳನ್ನು ಸಂಗ್ರಹಿಸಿದರೆ, ಅದರ ಪಾಪ ಅನುಭವಿಸುವುದು ನಮ್ಮ ಮಕ್ಕಳು. ಶಂಕುಲ ನಾಗನು ಕಾಳಹಸ್ತಿಯಲ್ಲಿ ಹಾಗೂ ನಾಗರಕೋಯಿಲಿನಲ್ಲಿ ನೆಲೆಸಿದ್ದಾನೆ. ದರ್ಶನ ಮಾಡಿ ಬನ್ನಿ. ನಿಮ್ಮನ್ನು ಕಾಪಾಡುತ್ತಾನೆ.

    ಮಿಥುನ

    ಮನಸ್ಸಿನ ನೆಮ್ಮದಿ ಕೆಟ್ಟರೆ ಅದು ಶರೀರದ ಮೇಲೆ ಹರಿದಾಡಿ ಶರೀರವನ್ನು ನುಂಗುತ್ತದೆ. ಅದಕ್ಕೆ ಔಷಧವಿಲ್ಲ. ಎಚ್ಚರಿಕೆಯಿಂದ ಧರ್ಮದ ಹಾದಿಯಲ್ಲಿ ನಡೆಯಿರಿ. ಕರ್ಣ-ಪರಶುರಾಮರಂತೆ ದಾನ ಮಾಡುವುದೂ ಬೇಡ. ಆದರೆ ದಾನ ಮಾಡದೆ ದುಡ್ಡು ಔಷಧಕ್ಕೆ ನೀಡುವಂತಾಗಬಾರದು ಗುರುವು ಏಪ್ರಿಲ್ 5ರಿಂದ 9ನೇ ಮನೆಯ ಸಂಚಾರದಿಂದ ಅಲ್ಪ ಸುಖ ಕಾಣುತ್ತೀರ.

    ಕಟಕ

    ನೀರು ಬಾಯಾರಿಕೆಯನ್ನು ಇಂಗಿಸುತ್ತದೆ. ಅದೇ ನೀರು ಪ್ರವಾಹ ತರುತ್ತದೆ. ದಾಹವನ್ನು ಇಂಗಿಸಲು ದಾನ ಮಾಡಬೇಕು. ಏಪ್ರಿಲ್ 5ರಿಂದ ಅಷ್ಟಮದಲ್ಲಿ ಗುರು ಸಂಚಾರ ಮಾಡುತ್ತಾನೆ. ಧೈರ್ಯದಿಂದ ಮುನ್ನುಗ್ಗಿ. ಕಷ್ಟಗಳು ನಿವಾರಣೆಯಾಗುತ್ತವೆ. ಗುರು ದತ್ತಾತ್ರೇಯನನ್ನು ಸ್ಮರಿಸಿ.

    ಸಿಂಹ

    ಶನಿಯು ಆರರಲ್ಲೇ ಇದ್ದು, ಗುರುವು 7ಕ್ಕೆ ಕುಂಭ ರಾಶಿಗೆ ಬರುತ್ತಾನೆ. ಮಖಾ ಎಂಬ ಮಹಾನಕ್ಷತ್ರದಿಂದ, ಪುಬ್ಬ, ಉತ್ತರದಿಂದ ಸಿಂಹ ರಾಶಿ ಪೂರ್ಣವಾಗುತ್ತದೆ. ಈ ರಾಶಿಯಲ್ಲಿ ಜನಿಸಿದವರು ಬೆಳಕನ್ನು ನೀಡಲು, ಸಹಾಯಹಸ್ತ ನೀಡಲು ಸಂಕುಚಿತ ಭಾವ ಇರಬಾರದು. ಸಮಯ ಚೆನ್ನಾಗಿದೆ. ಈಗಲಾದರೂ ದಾನ, ಧರ್ಮ ಮಾಡಿ.

    ಕನ್ಯಾ

    ಮಿಥುನ-ಕನ್ಯಾ ರಾಶ್ಯಾಧಿಪತಿ ಬುಧ. ಅಂದರೆ ಸಾಕ್ಷಾತ್ ಮಹಾವಿಷ್ಣುವೇ. ಬ್ರಹ್ಮನು ಸರಸ್ವತೀ ಸಹಿತವಾಗಿ ತನ್ನ ಶಕ್ತಿಯನ್ನು, ಹಾಗೆಯೇ ಉಮಾಮಹೇಶ್ವರನು ಪಾರ್ವತಿ ಸಮೇತ ತನ್ನ ಶಕ್ತಿಯನ್ನು ವಿಷ್ಣುವಿನಲ್ಲಿ ಇರಿಸಿದ್ದಾನೆ. ವಿಷ್ಣುಮಯಂ ಜಗತ್ತು. ತ್ರಿಮೂರ್ತಿಗಳು ತಮ್ಮ ತಮ್ಮ ಅಂಶದಲ್ಲಿ ಮನುಜನನ್ನು ಕಾಪಾಡುತ್ತಾರೆ. ಇನ್ನೇನು ಪಂಚಮ ಶನಿ ಬಿಡುವ ಕಾಲ. ಲಕ್ಷ್ಮೀ ನರಸಿಂಹನನ್ನು ಧ್ಯಾನಿಸಿ. ಹನುಮಾನ್ ಚಾಲೀಸಾ ಪಠಿಸಿ.

    ತುಲಾ

    ವೃಷಭ-ತುಲಾ ರಾಶಿಗೆ ಒಡೆಯ ಶುಕ್ರನೇ, ಧನ-ಧಾನ್ಯ, ಆಭರಣ, ಸಕಲ ಸಂಪತ್ತು ಭೋಗ-ಭಾಗ್ಯಗಳು ಕೊಡುವವನು ಅವನೇ. ಮಹಾಕಾಳಿ, ಮಹಾಲಕ್ಷ್ಮಿ, ಮಹಾ ಸರಸ್ವತಿ ಐಕ್ಯರೂಪ ಕಮಲಶಿಲೆಯ ದುರ್ಗೆಯನ್ನು ಪೂಜಿಸಿ. ಯಾವುದೋ ಸಮಸ್ಯೆ ಕಾಡುತ್ತಿದೆ. ಅದರಲ್ಲಿ ಜಯಶೀಲರಾಗುತ್ತೀರ. ಪಂಚಮಕ್ಕೆ ಗುರು ಬಂದಾಗ ನಿಮಗೆ ಜಯಸಿಗುತ್ತದೆ.

    ವೃಶ್ಚಿಕ

    ಈ ರಾಶಿಯಲ್ಲಿ ಕೇತುವಿದ್ದು, ಅಂಗಾರಕನ ಮನೆಯಲ್ಲಿ ಕುಳಿತಿದ್ದಾನೆ. ಸುಖಜೀವನ-ಸಂಪದ್ಭರಿತ ಜೀವನಕ್ಕೆ ಅಂಗಾರಕ ಬೇಕೇ ಬೇಕು. ಭೂಮಿಯಿಂದ ಲಾಭವನ್ನು ಮಾಡಿ, ಸಮಯ ಬಂದಾಗ ಗಣಿಗಾರಿಕೆಯಲ್ಲಿ ವಿಶೇಷ ಲಾಭ ಕೊಡುತ್ತಾನೆ. ಋಣವು ನಿಮ್ಮನ್ನು ಬಾಧಿಸುವುದಿಲ್ಲ. ನೀವು ಪಿತೃಋಣ, ದೈವಋಣ, ಋಷಿಋಣ ಇಟ್ಟುಕೊಳ್ಳುವ ವ್ಯಕ್ತಿಯಲ್ಲ. ಋಣ ತೀರಿದ ನಂತರ ನೀವು ವಿಜೃಂಭಿಸುತ್ತೀರ. ಸಾಧ್ಯವಾದಲ್ಲಿ ಚಂಡಿಕಾ ಯಾಗವನ್ನು ಮಾಡಿ.

    ಧನುಸ್ಸು

    ಗುರುವಿಲ್ಲದೆ ಯಾವುದಾದರೂ ಕೆಲಸವಾಗುವುದೇ? ದೈವವಿಲ್ಲದೆ ಕೆಲಸವು ಮುನ್ನಡೆಯುವುದೇ? ಜನ್ಮಾಂತರದ ಖಾತೆಯಲ್ಲಿದ್ದ ಶುಭವನ್ನು ಗುರುವು ಕೊಡುತ್ತಾನೆ. ದುಷ್ಟಾಕ್ಷರವನ್ನು ಅಳಿಸಿ ಸುಷ್ಟಾಕ್ಷರವನ್ನು ಬರೆಯುವವನು ಗುರುವೊಬ್ಬನೇ. ದತ್ತಾತ್ರೇಯನೊಬ್ಬನೇ ತ್ರಿಮೂರ್ತಿ ಸ್ವರೂಪನಾಗಿರುವವನು. ಗುರುವನ್ನು ಭಜಿಸಿ, ಗುರುವು 3ನೇ ಮನೆಗೆ ಬರುತ್ತಾನೆ. ಶನಿ ಶ್ರವಣ ನಕ್ಷತ್ರದಲ್ಲಿದ್ದು, ‘ಓಂ ಹ್ರೀಂ ಶ್ರೀಂ ರಂರಾಮಾಯ ನಮಃ’ ಎಂದು ಪಠಿಸಿ.

    ಮಕರ

    ಕಲಿಯುಗದಲ್ಲಿ ಧರ್ಮದಲ್ಲಿ ನಡೆದವನಿಗೆ ಶನಿಕಾಟವಿರುವುದಿಲ್ಲ. ಮಕರದಿಂದ ಗುರುವು ಕುಂಭರಾಶಿಗೆ ಬಂದು ದ್ವಿತೀಯದಲ್ಲಿ ನಿಮಗೆ ಅಲ್ಪ ಕಾಲ ಸುಖ ನೀಡುತ್ತಾನೆ. ದಶರಥ ವಿರಚಿತ ಶನಿಸ್ತೋತ್ರ ಪಠಿಸಿ. ಪೀಠಾಪುರದ ದತ್ತಕ್ಷೇತ್ರಕ್ಕೆ ಭೇಟಿ ನೀಡಿ. ಸಾಧ್ಯವಾದಲ್ಲಿ ಅಲ್ಲೇ ಪಾರಾಯಣ ಮಾಡಿ ಬನ್ನಿ.

    ಕುಂಭ

    ಹನ್ನೆರಡನೆ ಮನೆಯ ಗುರುವು ನಿಮ್ಮ ರಾಶಿಗೆ ಬಂದರೂ ಶನಿಯು ಅಲ್ಲೇ ಇರುತ್ತಾನೆ. ಈಗ ಯಾವ ಹೊಸ ವಿಚಾರ-ಯೋಜನೆಗಳು ಬೇಡ. ಯಾವುದೂ ಕೈಗೂಡುವುದಿಲ್ಲ. ಮಳೆ ಬಂದರೆ ಬೆಳೆಯೂ ಬರುತ್ತದೆ. ನಿಮಗೆ ಭಕ್ತಿಯಿದ್ದಲ್ಲಿ, ನಿಮಗೆ ಸಾಕಾಗುವಷ್ಟು ಧನವನ್ನು, ಸೌಖ್ಯವನ್ನು ಕೊಡುತ್ತಾನೆ. ಆರೋಗ್ಯದಲ್ಲಿ ಎಚ್ಚರವಹಿಸಿ. ಸುಬ್ರಹ್ಮಣ್ಯ ಸಹಸ್ರನಾಮ ಪಾರಾಯಣ ಮಾಡಿ.

    ಮೀನ

    ನಿಮ್ಮ ಮನೆಯ ಪುರೋಹಿತರ ಅಥವಾ ಕುಲಗುರುಗಳ ಸಲಹೆ ಅನುಸರಿಸಿದಲ್ಲಿ ಸಂತೋಷ ಕಾಣುತ್ತೀರಿ. 11ನೇ ಮನೆಯ ಗುರುವು ಹನ್ನೆರಡಕ್ಕೆ ಬರುತ್ತಾನೆ. ಆರೋಗ್ಯದಲ್ಲಿ ಅಲ್ಪ ಏರುಪೇರು ಇರುತ್ತದೆ. ಧನ್ವಂತರಿ ಸ್ತೋತ್ರವನ್ನು ಪಠಿಸಿ. ದಕ್ಷಿಣಾಮೂರ್ತಿಯನ್ನು ಆರಾಧಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts