ಕೂಡ್ಲಿಗಿಯಲ್ಲಿ ಹೋಳಿಗೆಮ್ಮ ಹಬ್ಬ ಆಚರಣೆ

1 Min Read
ಕೂಡ್ಲಿಗಿಯಲ್ಲಿ ಹೋಳಿಗೆಮ್ಮ ಹಬ್ಬ ಆಚರಣೆ
ಕೂಡ್ಲಿಗಿ ಪಟ್ಟಣದಲ್ಲಿ ಮಂಗಳವಾರ ಹೋಳಿಗೆಮ್ಮ ಹಬ್ಬದ ಅಂಗವಾಗಿ ಊರಮ್ಮ ದೇವಿ ದೇವಸ್ಥಾನಕ್ಕೆ ಹೊರಟಿರುವ ಭಕ್ತರು.

ಕೂಡ್ಲಿಗಿ: ಸಮೃದ್ಧ ಮಳೆ, ಬೆಳೆ ಹಾಗೂ ಆರೋಗ್ಯಕ್ಕಾಗಿ ಪಟ್ಟಣದಲ್ಲಿ ಪ್ರತಿ ವರ್ಷದಂತೆ ಮಂಗಳವಾರ ಸಂಜೆ ಹೋಳಿಗೆಮ್ಮ ಹಬ್ಬ ಆಚರಿಸಲಾಯಿತು. ಗ್ರಾಮ ದೇವತೆ ಊರಮ್ಮ ದೇವಿಗೆ ಹೋಳಿಗೆಯ ಎಡೆಯಿಟ್ಟು ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು.

ಪಟ್ಟಣದ ಮಹಿಳೆಯರು ಬೆಳಗ್ಗೆ ಮಡಿಯಿಂದ ಹೋಳಿಗೆ ಸಿದ್ಧಪಡಿಸಿದರು. ನಂತರ ಹೋಳಿಗೆಯೊಂದಿಗೆ ಇತರ ಭಕ್ಷ್ಯಗಳನ್ನು ಎಲೆಯಲ್ಲಿರಿಸಿಕೊಂಡು, ಪುಟ್ಟ ಮಣ್ಣಿನ ಮಡಿಕೆ, ಬೇವಿನ ಎಲೆ ಇರಿಸಿಕೊಂಡು ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಲ್ಲಿರುವ ಊರಮ್ಮ ದೇವತೆಯ ಪಾದಗಟ್ಟೆಯ ಬಳಿ ಭಕ್ತಿಯಿಂದ ಸಮರ್ಪಿಸಿದರು. ಪರಸ್ಪರ ಮಾತನಾಡದೆ ಮೌನವಾಗಿಯೇ ವ್ರತ ಆಚರಿಸಿದರು.

ಮನದಲ್ಲಿಯೇ ಇಷ್ಟಾರ್ಥಗಳನ್ನು ಈಡೇರಿಸುವಂತೆ ಕೋರಿ ಮನೆಗೆ ತೆರಳಿದರು. ನಂತರ ಮನೆಯ ಸದಸ್ಯರೆಲ್ಲರೂ ಸಾಮೂಹಿಕ ಊಟ ಮಾಡಿದರು.

See also  ಬಿಸಿಲ ನಾಡಲ್ಲಿ ಅಕ್ಷರ ಬಿತ್ತಿಬೆಳೆದ ಕೊಟ್ಟೂರೇಶ್ವರ
Share This Article