19 ವರ್ಷದ ಯುವಕನಿಗಾಗಿ ಚೆಕ್​ ಡ್ಯಾಂ ನೀರು ಖಾಲಿ ಮಾಡುತ್ತಿರುವ ಸಿಬ್ಬಂದಿ; ಆಗಿದ್ದೇನು ಗೊತ್ತಾ?

Check Dam 1
Published on

ಚಿತ್ರದುರ್ಗ: ಇಲ್ಲೊಂದು ಚೆಕ್​ಡ್ಯಾಮ್​ಗೆ ಸಾಲಾಗಿ ಪೈಪ್​ಗಳನ್ನು ಜೋಡಿಸಿ ನೀರನ್ನು ಖಾಲಿ ಮಾಡಲಾಗುತ್ತಿದೆ. ಈ ದೃಶ್ಯವನ್ನು ಆತಂಕದಿಂದಲೇ ಜನರು ವೀಕ್ಷಿಸುತ್ತಿದ್ದು, ಮತ್ತಷ್ಟು ಜನ ಜಮಾಯಿಸುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬೂತಯ್ಯನಹಟ್ಟಿಯ ಚೆಕ್​ಡ್ಯಾಮ್​​ನಲ್ಲಿ ಇಂಥದ್ದೊಂದು ದೃಶ್ಯ ಕಂಡುಬಂದಿದೆ. ಅಷ್ಟಕ್ಕೂ ಹೀಗೆ ಪೈಪ್ ಮೂಲಕ ಚೆಕ್​ಡ್ಯಾಂ ನೀರನ್ನು ಖಾಲಿ ಮಾಡಲಾಗುತ್ತಿರುವುದು 19 ವರ್ಷದ ಒಬ್ಬ ಯುವಕನಿಗಾಗಿ.

ಇಲ್ಲಿನ ಬೆಳಗಟ್ಟ ಗ್ರಾಮದ ಹರೀಶ್ ಕುಮಾರ್ (19) ಎಂಬಾತ ಈ ಚೆಕ್​ಡ್ಯಾಮ್​​ನಲ್ಲಿ ಈಜಲು ತೆರಳಿದ್ದು, ನೀರುಪಾಲಾಗಿದ್ದಾನೆ. ಆತನ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರೂ ಸುಳಿವು ಸಿಕ್ಕಿಲ್ಲ.

ಹೀಗಾಗಿ ಹಲವಾರು ಪೈಪ್​ಗಳ ಮೂಲಕ ಚೆಕ್​ಡ್ಯಾಂ ನೀರನ್ನು ಖಾಲಿ ಮಾಡಲಾಗುತ್ತಿದೆ. ಇನ್ನೂ ನೀರು ಖಾಲಿ ಮಾಡುವ ಪ್ರಕ್ರಿಯೆ ಮುಂದುವರಿದಿದ್ದು, ಸ್ಥಳೀಯು ಚೆಕ್​ಡ್ಯಾಂ ಬಳಿ ಜಮಾಯಿಸಿ ವೀಕ್ಷಿಸಲಾರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net