ಚಾಮರಾಜನಗರಕ್ಕೆ ಚಾರುಲತಾ ಸೋಮಾಲ್ ನೂತನ ಜಿಲ್ಲಾಧಿಕಾರಿ; 2 ಸಲ ವರ್ಗಾವಣೆ ಆದ್ರೂ ತೆರಳದ ರವಿ ಕೊನೆಗೂ ಎತ್ತಂಗಡಿ

Charulatha
Published on

ಚಾಮರಾಜನಗರ: ಎರಡು ಸಲ ವರ್ಗಾವಣೆ ಆಗಿದ್ದರೂ ಚಾಮರಾಜನಗರದಲ್ಲೇ ಮುಂದುವರಿದಿದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರನ್ನು ಸರ್ಕಾರ ಕೊನೆಗೂ ಎತ್ತಂಗಡಿ ಮಾಡಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಚಾರುಲತಾ ಸೋಮಾಲ್​ ಅವರನ್ನು ಚಾಮರಾಜನಗರಕ್ಕೆ ವರ್ಗಾವಣೆ ಮಾಡಲಾಗಿದೆ.

ಈ ಮೂಲಕ ಸ್ಥಳ ನಿರೀಕ್ಷೆಯಲ್ಲಿದ್ದ ಐಎಎಸ್​ ಅಧಿಕಾರಿ ಚಾರುಲತಾಗೆ ಸ್ಥಾನ ಸಿಕ್ಕಿದೆ. ಮತ್ತೊಂದೆಡೆ ರವಿ ಅವರಿಗೆ ಯಾವುದೇ ಸ್ಥಳ ಸೂಚಿಸದೆ ವರ್ಗಾವಣೆ ಮಾಡಿದ್ದು, ಸದ್ಯ ಅವರಿಗೆ ನೆಲೆ ಇಲ್ಲದಂತಾಗಿದೆ.

ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತಕ್ಕೆ 36 ಮಂದಿ ಬಲಿಯಾದ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಕರ್ತವ್ಯಲೋಪ ಎಂದು ನಿವೃತ್ತ ನ್ಯಾಯಮೂರ್ತಿಯವರು ಬೊಟ್ಟು ಮಾಡಿದ್ದರು. ಅಲ್ಲದೆ ಲಸಿಕೆ ಹಾಕಿಸಿಕೊಳ್ಳದಿದ್ದರೆ ಪಡಿತರವಿಲ್ಲ ಎಂದು ಆದೇಶ ಹೊರಡಿಸಿಯೂ ರವಿ ವಿವಾದಕ್ಕೆ ಒಳಗಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net