

ಹೆಬ್ರಿ: ಚಾರಾ ಮೇಲ್ಬೇಟ್ಟು ಶ್ರೀ ಬ್ರಹ್ಮ ಬೈದರ್ಕಳ, ಶಿವರಾಯ ಗರಡಿಯ ಪುನಃ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮ ಹೆಬ್ರಿ ಪೇಟೆಯಲ್ಲಿ ಶನಿವಾರ ನಡೆಯಿತು. ಗರಡಿಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಉದ್ಯಮಿ, ರೈತ ಸೇವಾ ಗ್ರಾಮೋದ್ಯೋಗದ ಕನ್ಯಾನ ಲಕ್ಷ್ಮೀನಾರಾಯಣ ನಾಯಕ್, ಪ್ರಮುಖರಾದ ಗುರುಪ್ರಸಾದ್ ಶೆಟ್ಟಿ ಹಕ್ಲುಮನೆ, ಮಿಥುನ್ ಶೆಟ್ಟಿ ಬಾವಿಗದ್ದೆ, ಸುರೇಂದ್ರ, ದಿವಾಕರ ಪೂಜಾರಿ, ಪ್ರಸನ್ನ ಶೆಟ್ಟಿ, ಪ್ರಭಾಕರ ಪೂಜಾರಿ, ಸುರೇಶ್ ಶೆಟ್ಟಿ ತಾರಾಳಿ, ರಿಕ್ಷಾ ಮಾಲೀಕರು ಹಾಗೂ ಚಾಲಕರು, ಟೆಂಪೋ ಮಾಲೀಕರು ಹಾಗೂ ಚಾಲಕರು ಉಪಸ್ಥಿತರಿದ್ದರು.