ಸರ್ಕಾರದ ಅನುದಾನದಿಂದ ಕಂಬಳ ಸಂಘಟನೆ

blank

ವಿಜಯವಾಣಿ ಸುದ್ದಿಜಾಲ ಕಾರ್ಕಳ

blank

ಮುಖ್ಯಮಂತ್ರಿ ಸಿದ್ದರಾಮಯ್ಯರವರು ಜಾನಪದ ಕ್ರೀಡೆಯ ನೆಲೆಯಲ್ಲಿ ಕಂಬಳಕ್ಕೆ 3.5 ಕೋಟಿ ರೂ. ಶಾಶ್ವತ ಅನುದಾನ ಘೋಷಿಸಿದ್ದು, ಕಂಬಳ ಸಂಘಟನೆಗೆ ನೆರವಾಗಲಿದೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಮಿಯ್ಯರು ಕಂಬಳ ಸಮಿತಿ, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಸಹಯೋಗದಲ್ಲಿ ಶನಿವಾರ 21ನೇ ವರ್ಷದ ಮಿಯ್ಯರು ಲವ-ಕುಶ ಜೋಡುಕರೆ ಕಂಬಳದಲ್ಲಿ ಮಾತನಾಡಿದರು.

ಕಂಬಳ ಸಮಿತಿ ಅಧ್ಯಕ್ಷ ವಿ.ಸುನೀಲ್ ಕುಮಾರ್ ಕಂಬಳ ಕೂಟ ಉದ್ಘಾಟಿಸಿದರು. ಮಿಯ್ಯರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರಧಾನ ಅರ್ಚಕ ಹರಿದಾಸ್ ಭಟ್, ಮಿಯ್ಯರು ಗ್ರಾಪಂ ಅಧ್ಯಕ್ಷೆ ಸನ್ಮತಿ ನಾಯಕ್ ಮಾತನಾಡಿದರು. ಪ್ರಮುಖರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಜೀವನ್‌ದಾಸ್ ಅಡ್ಯಂತಾಯ, ಕಾರ್ಯದರ್ಶಿ ದಯಾನಂದ ಬಂಗೇರ, ಸಹ ಕಾರ‌್ಯದರ್ಶಿ ಪ್ರಕಾಶ ಬಲಿಪ, ಕೋಶಾಧಿಕಾರಿಗಳಾದ ಶ್ಯಾಮ ಎನ್.ಶೆಟ್ಟಿ, ರವೀಂದ್ರ ಕುಮಾರ್, ಉಪಾಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್, ಅಂತೋನಿ ಡಿಸೋಜ, ಉದಯ ಎಸ್. ಕೋಟ್ಯಾನ್, ಸುನೀಲ್ ಕುಮಾರ್ ಬಜಗೋಳಿ, ಸಮಿತಿಯ ಶುಭದ ರಾವ್ ಕಾರ್ಕಳ, ಉಮೇಶ್ ರಾವ್, ಜಿಲ್ಲಾ ಕಂಬಳ ಸಮಿತಿ ಮಾಜಿ ಅಧ್ಯಕ್ಷ ಡಾ.ಜೀವಂಧರ ಬಳ್ಳಾಲ್ ಬಾರಾಡಿಬೀಡು, ಸಮಿತಿ ಸದಸ್ಯರು, ಮಹಾ ಪೋಷಕರು ಮತ್ತಿತರರು ಉಪಸ್ಥಿತರಿದ್ದರು. ಕಂಬಳ ಸಮಿತಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಗುಣಪಾಲ ಕಡಂಬ ಸ್ವಾಗತಿಸಿದರು.

ಕಂಬಳವನ್ನು ರಾಜ್ಯಮಟ್ಟದ ಕ್ರೀಡೆಯಾಗಿ ಪರಿಚಯಿಸುವುದಕ್ಕೆ ಎರಡು ವರ್ಷದಿಂದ ಪ್ರಯತ್ನ ನಡೆಯುತ್ತಿದ್ದು, ಅದಕ್ಕಾಗಿ ರೂಪುರೇಷೆ ರೂಪಿಸುವುದರ ಜತೆಗೆ ಸರ್ಕಾರದ ಗಮನಕ್ಕೆ ತರಲಾಗಿದೆ.
– ಮಂಜುನಾಥ ಭಂಡಾರಿ, ವಿಧಾನಪರಿಷತ್ ಸದಸ್ಯ

ರೈಲ್ವೆ ವೃತ್ತವಾಗಿ ಮಂಗಳೂರು ಮಾರ್ಪಾಡು ಬೇಡಿಕೆಗೆ ಸ್ಪಂದನೆ

ಜಿಲ್ಲೆಯಲ್ಲಿ ಶಿಶುಮರಣ ಶೂನ್ಯ

 

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank