ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮಾಜದಲ್ಲಿ ಬದಲಾವಣೆ

Kdb_Society
Published on

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕಿನ ಸೇವಾ ಪ್ರತಿನಿಧಿಗಳ ಅರ್ಧ ವಾರ್ಷಿಕ ಪ್ರಗತಿ ಪರಿಶೀಲನಾ ಸಭೆ ಕಡಬದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ 2 ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮಾಜದಲ್ಲಾದ ಅನೇಕ ಬದಲಾವಣೆಗಳು, ಅಭಿವೃದ್ಧಿ ಕಾರ್ಯಗಳು ಪೂಜ್ಯರ ದೂರದಷ್ಟಿಯ ಸಂಕೇತ. ರಾಜ್ಯಾದ್ಯಂತ ಪಸರಿಸಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಸಂಘದ ಪ್ರಗತಿ ನಿಧಿ ಸಾಲ ಸೌಲಭ್ಯಗಳು ರಾಷ್ಟ್ರೀಕೃತ ಬ್ಶಾಂಕಿನ ಅನುಮೊದನೆಯೋಂದಿಗೆ ಕಾನೂನಾತ್ಮಕವಾಗಿ ನಡೆಯುತ್ತಿರುತ್ತದೆ ಎಂದರು.

ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಸೇವಾಪ್ರತಿನಿಧಿಗಳಲ್ಲಿರಬೇಕಾದ ವೃತ್ತಿಬದ್ಧತೆ ಹಾಗೂ ಮುಂದಿನ ಗುರಿ ಸಾಧನೆಗಳ ಬಗ್ಗೆ, ಜಿಲ್ಲಾ ಎಂಐಎಸ್ ಯೋಜನಾಧಿಕಾರಿ ಶಕುಂತಲಾ ಬ್ಶಾಂಕಿಂಗ್ ಸೌಲಭ್ಯಗಳಿಗೆ ಸಂಘದಿಂದ ನೀಡಬೇಕಾದ ದಾಖಲಾತಿಗಳು ಹಾಗೂ ಸಮಯದ ಬಗ್ಗೆ ಮಾಹಿತಿ ನೀಡಿದರು.

ತಾಲೂಕು ಹಣಕಾಸು ಪ್ರಬಂಧಕಿ ಸುಜಾತ ತಾಲೂಕಿನ ಸೇವಾಪ್ರತಿನಿಧಿಗಳ ವಾರ್ಷಿಕ ಗುರಿ ಹಾಗೂ ಅರ್ಧವಾರ್ಷಿಕ ಸಾಧನೆಗಳ ವಿವರದ ಗಣಕೀಕೃತ ಮಾಹಿತಿಯನ್ನು ಪ್ರದರ್ಶಿಸಿದರು. ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ, ತಾಲೂಕು ಕೃಷಿ ಮೇಲ್ವಿಚಾರಕ ಸೋಮೇಶ್ , ತಾಲೂಕು ವಿಚಕ್ಷಣಾಧಿಕಾರಿ ಶೀಲಾ, ತಾಲೂಕು ಸಿಎಸ್‌ಸಿ ನೋಡಲ್ ಅಧಿಕಾರಿ ರಕ್ಷಕ್ ಮೊದಲಾದವರು ಉಪಸ್ಥಿತರಿದ್ದರು.

ನೆಲ್ಶಾಡಿ ವಲಯ ಮೇಲ್ವಿಚಾರಕ ಆನಂದ್ ಡಿ.ಬಿ ಸ್ವಾಗತಿಸಿ, ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ವಂದಿಸಿದರು. ಆಲಂಕಾರು ವಲಯ ಮೇಲ್ವೀಚಾರಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net