

ಮಂಗಳೂರು : ನಗರದ ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಎಂಎಸ್‌ಎನ್‌ಐಎಂ) ವತಿಯಿಂದ ಎಂಆರ್‌ಪಿಎಲ್‌ನ ವಿಜಿಲೆನ್ಸ್ ಜಾಗೃತಿ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ಎಂಆರ್‌ಪಿಎಲ್-ಎಂಎಸ್‌ಎನ್‌ಐಎಂ ಜಾಗೃತಿ ಸ್ಪರ್ಧೆ ನಡೆಯಿತು. ನಗರದ ಬೋಂದೆಲ್‌ನಲ್ಲಿರುವ ಎಂಎಸ್‌ಎನ್‌ಐಎಂ ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿದ.ಕ. ಮತ್ತು ಉಡುಪಿ ಜಿಲ್ಲೆಗಳ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಎಂಆರ್‌ಪಿಎಲ್‌ನ ಮುಖ್ಯ ವಿಜಿಲೆನ್ಸ್ ಅಧಿಕಾರಿ ಗಣೇಶ್ ಎಸ್.ಭಟ್ ಮುಖ್ಯ ಅತಿಥಿಯಾಗಿ
ಭಾಗವಹಿಸಿದ್ದರು. ಮಹಿಳಾ ರಾಷ್ಟ್ರೀಯ ಶಿಕ್ಷಣ ಸೊಸೈಟಿಯ ಅಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂಆರ್‌ಪಿಎಲ್‌ನ ಮುಖ್ಯ ಮಹಾಪ್ರಬಂಧಕರಾದ ಲಕ್ಷ್ಮೀಶ್ ಭಟ್, ರಾಕೇಶ್ ಲೋಬೋ, ಹಿರಿಯ ಪ್ರಬಂಧಕಿ ಲಕ್ಷ್ಮೀ. ಕೆ. ಮತ್ತು ಪಾರ್ಥ ಪ್ರತಿಮ್ ಗೋಸ್ವಾಮಿ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕಿ ಡಾ. ಮೊಲ್ಲಿ ಎಸ್. ಚೌಧುರಿ ಸ್ವಾಗತಿಸಿದರು. ಎಂಆರ್‌ಪಿಎಲ್‌ನ ಹಿರಿಯ ಪ್ರಬಂಧಕ ದಿಬ್ಯೇಂದು ಸಾಹಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು, ಮುಖ್ಯ ಪ್ರಬಂಧಕ ಜಿಮ್ಮಿ ಜೈಸಿಂಗ್ ಮಲಿಕ್ ಅವರು ಸಮಗ್ರತೆಯ ಪ್ರತಿಜ್ಞೆ ಬೋಧಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಶಿಲ್ಪಿ ಸಾಹಾ ಕಾರ್ಯಕ್ರಮದ ವರದಿ ನೀಡಿದರು. ಸಹ ಪ್ರಾಧ್ಯಾಪಕಿ ಡಾ.ರೀಮಾ ಆಗ್ನೆಸ್ ಫ್ರಾಂಕ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ನಂದಿತಾ ಸುನೀಲ್ ಮತ್ತು ಅದಿತಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು.