

ಮಂಗಳೂರು : ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಲಡಾಖ್ನ ಮನಮೋಹಕ ಪ್ರದೇಶವನ್ನು ಕೇಂದ್ರೀಕರಿಸಿದ ಮತ್ತು ಶೈಕ್ಷಣಿಕ ಕಲಾ ಸಂಯೋಜಿತ ಪ್ರಾಜೆಕ್ಟ್ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳು ಆಕರ್ಷಕವಾದ ಮೇಣದ ವಸ್ತು ಸಂಗ್ರಹಾಲಯದೊಂದಿಗೆ, ಲಡಾಖ್ನ ಪ್ರಸಿದ್ಧ ವ್ಯಕ್ತಿಗಳಂತೆ ಉಡುಪುಗಳನ್ನು ಧರಿಸಿ ಕಥೆಗಳನ್ನು ಹಂಚಿಕೊಂಡರು.
ವಿವಿಧ ತರಗತಿಗಳ ವಿದ್ಯಾರ್ಥಿಗಳು ಲಡಾಖ್ ಪ್ರದೇಶದ ವಿಶಿಷ್ಟ ಪಾಕಪದ್ದತಿ, ಸಾಂಪ್ರದಾಯಿಕ ಲಡಾಖಿ ನೃತ್ಯ, ಲಡಾಖ್ನ ಸಾಂಪ್ರದಾಯಿಕ ವಿವಾಹ ಪದ್ದತಿ, ಜಬ್ರೋ ಮತ್ತು ಚಾಮ್ ನೃತ್ಯವನ್ನು ಪ್ರದರ್ಶಿಸಿದರು.ಲಡಾಖ್ ಪ್ರದೇಶದ ಅದ್ಭುತ ದೃಶ್ಯಾವಳಿಗಳನ್ನು ಸುಂದರವಾಗಿ ಮರುಸೃಷ್ಟಿಸಿದರು.ಲಡಾಖಿ ಶಾಲೆಯ ಬಗ್ಗೆ ಒಂದು ಕಿರುನಾಟಕವನ್ನು ಪ್ರಸ್ತುತಪಡಿಸಿದರು, ಲಡಾಖ್ನ ವಿಶಿಷ್ಟ ವಾಸ್ತುಶಿಲ್ಪ, ಸ್ಮಾರಕಗಳು, ಸಂಪ್ರದಾಯಗಳು, ಸಸ್ಯ ಮತ್ತು ಪ್ರಾಣಿಗಳು, ವೈವಿಧ್ಯಮಯ ಭೌಗೋಳಿಕತೆಯನ್ನು ವಿವರಿಸುವ ಸೃಜನಶೀಲ ಕೊಲಾಜ್ಗಳನ್ನು ಪ್ರದರ್ಶಿಸಿದರು.
ಶಕ್ತಿ ಶಿಕ್ಷಣ ಟ್ರಸ್ಟ್ನ ಆಡಳಿತಾಧಿಕಾರಿ ಡಾ.ಕೆ.ಸಿ.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು.ಮುಖ್ಯ ಸಲಹೆಗಾರ ರಮೇಶ್ ಕೆ, ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲ ಬಬಿತಾ ಸೂರಜ್ ಉಪಸ್ಥಿತರಿದ್ದರು.