ದೇವರ ಕೋಣೆಯಲ್ಲಿತ್ತು ಮಗುವಿನ ಶವ: ತಂದೆ-ತಾಯಿಯಿಂದಲೇ ಕೃತ್ಯ, ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

Child Death
Published on

ಚಾಮರಾಜನಗರ: ತಂದೆ ಹಾಗೂ ಮಲತಾಯಿ ಸೇರಿಕೊಂಡು ಐದು ವರ್ಷದ ಹೆಣ್ಣು ಮಗುವನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿಯಲ್ಲಿ ನಡೆದಿದೆ.

ಎರಡನೇ ಹೆಂಡತಿಗೆ ಮಕ್ಕಳಾಗಲಿಲ್ಲ ಎಂಬ ಹೊಟ್ಟೆ ಕಿಚ್ಚಿಗೆ ಬಾಲಕಿಯನ್ನು ಕೊಂದು ಶವವನ್ನು ಆರೋಪಿಗಳು ದೇವರ ಕೋಣೆಯಲ್ಲಿಟ್ಟಿದ್ದರು. ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಮಹೇಶ್​ ಹಾಗೂ ರತ್ನಮ್ಮ ಎಂದು ಗುರುತಿಸಲಾಗಿದೆ.

ಮಹೇಶ್ ಹಾಗೂ ಗೌರಮ್ಮ ದಂಪತಿಗೆ ಹೆಣ್ಣು ಮಗುವಿತ್ತು. ಇದರ ನಡುವೆ ಗೌರಮ್ಮ ಗಂಡನನ್ನು ಬಿಟ್ಟು ಬೇರೆ ಮದುವೆಯಾಗಿದ್ದಳು. ನಂತರ ಮಹೇಶನೂ ರತ್ಮಮ್ಮ ಎಂಬಾಕೆಯನ್ನು ಮದುವೆಯಾಗಿದ್ದ. ಆದರೆ, ಇವರಿಗೆ ಮಕ್ಕಳಾಗಿರಲಿಲ್ಲ. ಒಮ್ಮೆ ಮೊದಲ ಹೆಂಡತಿ ತನ್ನ ಮಗಳೊಂದಿಗೆ ಪಕ್ಕದ ಮನೆಯ ಸಮಾರಂಭವೊಂದಕ್ಕೆ ಬಂದಿದ್ದಳು.

ಸಮಾರಂಭದಿಂದ ಮಗುವನ್ನು ಅಪಹರಿಸಿ, ಕೊಲೆ ಮಾಡಿ ಮಗುವಿನ ಶವವನ್ನು ಚೀಲದಲ್ಲಿ ಕಟ್ಟಿ ಮಹೇಶ್-ರತ್ನಮ್ಮ ದಂಪತಿ ದೇವರ ಕೋಣೆಯಲ್ಲಿ ಬಚ್ಚಿಟ್ಟಿದ್ದರು. ಮಗು ಪತ್ತೆಯಾಗದಿದ್ದಾಗ ಗೌರಮ್ಮ ಕಾಣೆಯಾಗಿರುವುದಾಗಿ ನಿನ್ನೆ ರಾತ್ರಿ ದೂರು ದಾಖಲಿಸಿದ್ದಳು. ಕೇವಲ 12 ಗಂಟೆಯೊಳಗೆ ಗುಂಡ್ಲುಪೇಟೆ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ದೇವರ ಕೋಣೆಯಲ್ಲಿ ಬಚ್ಚಿಟ್ಟಿದ್ದ ಶವವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net