

ಕೊಡಗು: ಮಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲಾದ ಎಂಬ ಬೇಸರದಿಂದ ತಂದೆಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಚೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.
ಕೂಲಿ ಕಾರ್ಮಿಕ ರಘು(39) ಆತ್ಮಹತ್ಯೆ. ತನ್ನ ಪತ್ನಿಯ ವೇಲ್ ಬಳಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ನಾಲ್ಕು ವಿಷಯದಲ್ಲಿ ಮಗ ಪ್ರಶಾಂತ್ ಅನುತೀರ್ಣನಾಗಿದ್ದ. ಮಗ ಫೇಲ್ ಆಗಿದ್ದಕ್ಕೆ ತಂದೆ ಕುಡಿತದ ದಾಸನಾಗಿದ್ದ ಎಂದು ಆತನ ಪತ್ನಿ ಮಂಜುಳಾ ಹೇಳಿದ್ದಾರೆ.
ಪತ್ನಿ ಕೆಲಸಕ್ಕೆ ಹೋಗಿದ್ದ ವೇಳೆ ಆತ್ಮಹತ್ಯೆ ಶರಣಾಗಿದ್ದಾನೆ. ಸೋಮವಾರ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಸಿದ್ದಾಪುರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)