ಚಾಮರಾಜನಗರದ ಹಸಿರು ವಲಯದ ಕನಸು ಮಳವಳ್ಳಿ ಸೋಂಕಿತನಿಂದ ಭಗ್ನವಾಗಲಿದೆಯೇ?

Chamarajanagara
Published on

ಚಾಮರಾಜನಗರ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ಮೇ21 ರಂದು ಕರೊನಾ ಧೃಡಪಟ್ಟಿರುವ ಸೋಂಕಿತ( ರೋಗಿ-1471) ಜಿಲ್ಲೆ ಜನರನ್ನು ಸಂಪರ್ಕಿಸಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಯಳವರಹುಂಡಿಯ ವರನೊಂದಿಗೆ ಚಾಮರಾಜನಗರ ತಾಲೂಕಿನ ಸೋಮವಾರಪೇಟೆಯ ವಧುವಿನ ವಿವಾಹ ಮೇ 20ರಂದು ನಡೆದಿತ್ತು. ವರನ ಮನೆಯಲ್ಲೇ ನಡೆದ ಮದುವೆಗೆ ‌ಮಂಡ್ಯದಲ್ಲಿ ಕರೊನಾ ಧೃಡಪಟ್ಟಿರುವ ಸೋಂಕಿತ ಭಾಗವಹಿಸಿದ್ದ ಎಂದು ತಿಳಿದು ಬಂದಿದೆ.

ಯಳವರಹುಂಡಿಯಲ್ಲಿ ಈ ಸಂಬಂಧ ಸೋಂಕಿತನನ್ನು ಸಂಪರ್ಕಿಸಿದ್ದವರನ್ನು ಗುರುತಿಸುವ ಕಾರ್ಯ ನಡೆಯುತ್ತಿರುವುದು ಸೋಮವಾರಪೇಟೆಯಿಂದ ವಧುವಿನೊಂದಿಗೆ ವಿವಾಹದಲ್ಲಿ ಭಾಗಿಯಾಗಿದ್ದವರಿಗೆ ತಿಳಿದು ಇಡೀ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಮದುವೆಗೆ ಗ್ರಾಮದಿಂದ 70ಕ್ಕೂ ಹೆಚ್ಚು ಜನರು ತೆರಳಿದ್ದರು. ಇವರಲ್ಲಿ ಯಾರಿಗಾದರೂ ಸೋಂಕು ತಗುಲಿದ್ದರೆ ನಮಗೂ ಕರೊನಾ ಬರುತ್ತದೆ. ಕೂಡಲೇ ಅಧಿಕಾರಿಗಳು ಸೋಂಕಿತ ಸಂಪರ್ಕ ಮಾಡಿದ್ದವರನ್ನು ಗುರುತಿಸಿ ಕ್ವಾರಂಟೈನ್ ಗೊಳಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮಂಡ್ಯ ಸೋಂಕಿತನ ಪ್ರಯಾಣದ ವಿವರ ಅಧಿಕೃತವಾಗಿ ಇಲಾಖೆಯಿಂದ ಕೈ ಸೇರಿಲ್ಲ ಎಂದು ಈ ಕುರಿತು ಡಿಎಚ್ ಒ ಡಾ.ಎಂ.ಸಿ.ರವಿ ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net