More

    ಕರೊನಾಕ್ಕೆ ರುಬೊಲಾ ಚುಚ್ಚುಮದ್ದು, ಮನೆಯವರ ಮೇಲೆ ಪ್ರಯೋಗಿಸಿದ ವೈದ್ಯ

    ಚಿಕ್ಕೋಡಿ: ಮಾರಕ ಕರೊನಾ ಸೋಂಕಿನ ಚಿಕಿತ್ಸೆಗಾಗಿ ವಿಶ್ವದಾದ್ಯಂತ ಲಸಿಕೆ ಕಂಡುಹಿಡಿಯುವ ಪ್ರಯೋಗಗಳು ಭರದಿಂದ ಸಾಗುತ್ತಿವೆ. ಈ ನಡುವೆ ಆಯುರ್ವೇದದಲ್ಲೂ ನಾಲ್ಕು ಔಷಧಗಳ ಪ್ರಾಯೋಗಿಕ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ನಡುವೆ ಚಿಕ್ಕೋಡಿಯ ಅಥಣಿ ವೈದ್ಯರೊಬ್ಬರು ತಮ್ಮದೇ ಆದ ಔಷಧವನ್ನು ಕಂಡುಹಿಡಿದಿದ್ದಾರೆ. ಅಲ್ಲದೆ, ತಮ್ಮ ಮನೆಯವರ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ.

    ಕರೊನಾಕ್ಕೆ ರುಬೊಲಾ ಚುಚ್ಚುಮದ್ದು, ಮನೆಯವರ ಮೇಲೆ ಪ್ರಯೋಗಿಸಿದ ವೈದ್ಯ

    ಡಾ. ರಮೇಶ್​ ಗುಳ್ಳ ಈ ಪ್ರಯೋಗ ಮಾಡಿರುವ ವೈದ್ಯ. ಇವರ ಪ್ರಕಾರ ರುಬೊಲಾ ಚಿಕಿತ್ಸೆಗೆ ಬಳಸುವ ಚುಚ್ಚುಮದ್ದನ್ನು ತೆಗೆದುಕೊಂಡರೆ ಕರೊನಾ ಸೋಂಕಿನ ಆತಂಕದಿಂದ ಪಾರಾಗಬಹುದು ಎಂದು ಪ್ರತಿಪಾದಿಸಿದ್ದಾರೆ.

    ಇದನ್ನೂ ಓದಿ: ರೈಲು ನಿಲ್ದಾಣಗಳಲ್ಲೂ ಟಿಕೆಟ್​ ಮುಂಗಡ ಕಾಯ್ದಿರಿಸುವಿಕೆ ಕೌಂಟರ್​ಗಳು ಕಾರ್ಯಾರಂಭ

    ಮುಂಬೈಯಲ್ಲಿ ಕ್ಯಾನ್ಸರ್​ ವೈದ್ಯರಾಗಿ ಸೇವೆ ಸಲ್ಲಿಸಿರುವ ಡಾ. ರಮೇಶ್​ ಗುಳ್ಳ, ಪ್ರಕಾರ ಎಂಆರ್​ಎಂಎಂಆರ್​ ಚುಚ್ಚುಮದ್ದನ್ನು ಮುಂಜಾಗ್ರತಾ ಕ್ರಮವಾಗಿ ತೆಗೆದುಕೊಂಡರೆ ಕರೊನಾ ಸೋಂಕು ತಗಲುವ ಭಯವೇ ಇರುವುದಿಲ್ಲವಂತೆ.

    ಈ ಚುಚ್ಚುಮದ್ದನ್ನು ತಮ್ಮ ಮನೆಯವರ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿರುವುದಾಗಿ ಹೇಳಿಕೊಂಡಿರುವ ಅವರು, ಕೇವಲ 150 ರೂ. ವೆಚ್ಚದಲ್ಲಿ ಈ ಚಿಕಿತ್ಸೆ ಲಭ್ಯ ಇರುವುದಾಗಿ ಹೇಳಿಕೊಂಡಿದ್ದಾರೆ. ಈ ಔಷಧ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಯಥೇಚ್ಚವಾಗಿ ಲಭ್ಯ ಇರುವುದಾಗಿ ಹೇಳಿದ್ದಾರೆ.

    ದೇಶಿಯ ವಿಮಾನಯಾನ ಟಿಕೆಟ್​ ದರಗಳು ಫಿಕ್ಸ್​, ಬೆಂಗಳೂರಿಂದ ಎಲ್ಲೆಲ್ಲಿಗೆ ಎಷ್ಟೆಷ್ಟು ದರ ವಿವರ ಇಲ್ಲಿದೆ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts