More

    IPL 2024: ಟಾಸ್​ ಗೆದ್ದ ಮುಂಬೈ ತಂಡದಿಂದ ಬೌಲಿಂಗ್​ ಆಯ್ಕೆ!

    ಮುಂಬೈ: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್​ ಮತ್ತು ಕೊನೆಯಿಂದ ಎರಡನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್​ ತಂಡಗಳು ಶುಕ್ರವಾರ ಇಲ್ಲಿ ನಡೆಯುವ ಐಪಿಎಲ್​ನ 51 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

    ಇದನ್ನೂ ಓದಿ:  ಲೋಕಸಭೆ ಚುನಾವಣೆ: ರಾಯ್ ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ!

    ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಟೂರ್ನಿಯಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿ ಆಗಿದೆ. ಕೋಲ್ಕತಾ ನೈಟ್​ ರೇಡರ್ಸ್ ವಿರುದ್ಧ ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್​ ಮೊದಲು ಬೌಲಿಂಗ್​ ನಡೆಸುವ ನಿರ್ಧಾರ ಕೈಗೊಂಡಿದೆ.

     

    ಕೆಕೆಆರ್ ತಂಡ ಇದುವರೆಗೆ ಅಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 3ರಲ್ಲಿ ಸೋಲು ಕಂಡು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ನೆಲೆಸಿದೆ. ಮುಂಬೈ ತಂಡ ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿಯಲ್ಲಿದ್ದು, ಆಡಿರುವ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಮಾತ್ರ ಗೆದ್ದಿದ್ದು, 7ರಲ್ಲಿ ಸೋಲು ಕಂಡಿದೆ.

    ಇಂಡಿಯನ್ಸ್ ತಂಡದ ಹಾರ್ದಿಕ್ ಪಾಂಡ್ಯ ಪಡೆ ಇನ್ನು ಗರಿಷ್ಠ 14 ಅಂಕ ಗಳಿಸಲು ಅವಕಾಶವಿದೆ. ಹೀಗಾಗಿ ಅಧಿಕೃತವಾಗಿ ಇನ್ನೂ ಟೂರ್ನಿಯಿಂದ ಹೊರಬೀಳದಿದ್ದರೂ, ಪ್ಲೇಆಫ್ ಹಂತಕ್ಕೇರುವುದು ಬಹುತೇಕ ಅಸಾಧ್ಯವೆನಿಸಿದೆ. ಟೂರ್ನಿಯ ಇತಿಹಾಸ ಗಮನಿಸಿದಾಗ ಉಭಯ ತಂಡಗಳ ಮುಖಾಮುಖಿ ಗಮನಿಸಿದಾಗ ಮುಂಬೈ ತಂಡ ಕೆಕೆಆರ್‌ಗಿಂತ ದುಪ್ಪಟ್ಟಿಗೂ ಅಧಿಕ ಪಂದ್ಯ ಗೆದ್ದುಕೊಂಡಿದೆ. ಆದರೆ ಹಾಲಿ ಫಾರ್ಮ್‌ ನಲ್ಲಿ ಕೆಕೆಆರ್ ತಂಡವೇ ಫೇವರಿಟ್ ಆಗಿ ಕಾಣಿಸುತ್ತಿದೆ.

    ಪಿಚ್​ ರಿಪೋರ್ಟ್​: ಮುಂಬೈಯ ವಾಂಖೆಡೆ ಕ್ರೀಡಾಂಗಣವು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. ಇಲ್ಲಿ ನಡೆದ ಐಪಿಎಲ್​ನ ಬಹುತೇಕ ಪಂದ್ಯಗಳು ಹೈಸ್ಕೋರಿಂಗ್ ಆಗಿದೆ. 2017ರಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ 235 ರನ್​ ಬಾರಿಸಿತ್ತು. ಇದು ಇಲ್ಲಿ ದಾಖಲಾದ ಅತ್ಯಧಿಕ ಮೊತ್ತವಾಗಿದೆ. ಇನ್ನು ಚೇಸಿಂಗ್​ ನಡೆಸಿದ ತಂಡಗಳೇ ಹೆಚ್ಚು ಬಾರಿ ಮೇಲುಗೈ ಸಾಧಿಸಿದೆ.

     

    ಸೋಲುವ ಭೀತಿಯಿಂದ ರಾಹುಲ್ ಅಮೇಠಿಯಿಂದ​ ಪಲಾಯನ ಮಾಡಿದ್ದಾರೆ: ಸ್ಮೃತಿ ಇರಾನಿ ಟೀಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts