ಸೋಲುವ ಭೀತಿಯಿಂದ ರಾಹುಲ್ ಅಮೇಠಿಯಿಂದ​ ಪಲಾಯನ ಮಾಡಿದ್ದಾರೆ: ಸ್ಮೃತಿ ಇರಾನಿ ಟೀಕೆ

rt
Published on

ನವದೆಹಲಿ: ಕಾಂಗ್ರೆಸ್ ಪಕ್ಷ ಈ ಬಾರಿ ಅಮೇಠಿಯಲ್ಲಿ ಕಿಶೋರಿ ಲಾಲ್ ಶರ್ಮಾ ಅವರಿಗೆ ಟಿಕೆಟ್ ಕೊಟ್ಟಿದೆ. ರಾಹುಲ್ ಗಾಂಧಿ ಅವರು ತಮ್ಮ ತಾಯಿ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿ ಕ್ಷೇತ್ರದಿಂದ ಇಂದು ನಾಮಪತ್ರ ಸಲ್ಲಿಕೆ ಮಾಡಿದ ಬೆನ್ನೆಲ್ಲೇ ಕಾಂಗ್ರೆಸ್ ಪಕ್ಷದ ಈ ನಿರ್ಧಾರಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್​ ಪಕ್ಷದ ಈ ಹಿಂದಿನ ಭದ್ರಕೋಟೆಯಾಗಿರುವ ಅಮೇಠಿಯಲ್ಲಿ ಲೋಕಸಭೆ ಚುನಾವಣೆಗೂ ಮುನ್ನವೇ ಸೋಲನ್ನು ಒಪ್ಪಿಕೊಂಡಿದೆ. ಗಾಂಧಿ ಕುಟುಂಬದ ಒಬ್ಬರು ಕೂಡ ಈ ಕ್ಷೇತ್ರದಿಂದ ಸ್ಪರ್ಧೆ ಮಾಡದಿರುವುದು ಆಶ್ಚರ್ಯ ತಂದಿದ್ದು ಅವರಿಗೆ ಸೋಲುವ ಸೂಚನೆ ಸಿಕ್ಕಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಶುಕ್ರವಾರ ಹೇಳಿದ್ದಾರೆ.

ಅಮೇಠಿ ಕ್ಷೇತ್ರದ ಮತದಾರರು ಮೋದಿ ಸರ್ಕಾರದ ಅಭಿವೃದ್ಧಿಯನ್ನು ನೋಡಿದ್ದಾರೆ, ಕಳೆದ 50 ವರ್ಷಗಳಲ್ಲಿ ಇದು ಏಕೆ ಆಗಲಿಲ್ಲ ಎಂದು ಅಶ್ಚರ್ಯ ವ್ಯಕ್ತಪಡಿಸಿದ ಅವರು, ಈ ಪ್ರದೇಶದಲ್ಲಿ ಗಾಂಧಿ ಕುಟುಂಬದಲ್ಲಿ ಏಕೆ ಹೆಚ್ಚಿನ ಹಾನಿಯನ್ನುಂಟು ಮಾಡಿದರು ಎಂದು ಜನತೆ ಪ್ರಶ್ನಿಸುತ್ತಿದ್ದಾರೆ ಎಂದು ಇರಾನಿ ಕೇಳಿದರು.

ಕೇರಳದ ವಯನಾಡಿದಲ್ಲಿ ಲೋಕಸಭೆ ಚುನಾವಣೆ ನಂತರ ರಾಹುಲ್ ಗಾಂಧಿ ಹೊಸ ಕ್ಷೇತ್ರ ನೋಡಿಕೊಳ್ಳಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಇಂದು ಅದು ಸಂಭವಿಸುವುದನ್ನು ನೀವು ನೋಡುತ್ತಿದ್ದೀರಿ" ಎಂದು ಕೇಂದ್ರ ಸಚಿವೆ ಇರಾನಿ ಅವರು ಹೇಳಿದರು. ರಾಹುಲ್ ಕೇರಳದ ವಯನಾಡ್ ನಿಂದ ಹಾಲಿ ಸಂಸದರಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net