ಅಹಮದಾಬಾದ್: ಹಾಲಿ ಚಾಂಪಿಯನ್ ಸಿಎಸ್‌ಕೆ ಎದುರಿನ ಗೆಲುವಿನ ಮೂಲಕ ಪ್ಲೇಆ್ ಆಸೆ ಜೀವಂತವಿರಿಸಿರುವ ಗುಜರಾತ್ ಟೈಟಾನ್ಸ್ ತಂಡ ಸೋಮವಾರ ಅಂಕಪಟ್ಟಿಯ ಅಗ್ರಸ್ಥಾನಿ ಕೋಲ್ಕತ ನೈಟ್ ರೈಡರ್ಸ್ ವಿರುದ್ಧ ಸೆಣಸಾಡಲಿದೆ. ನಾಯಕ ಶುಭಮಾನ್ ಗಿಲ್ ಫಾರ್ಮ್‌ಗೆ ಮರಳಿರುವುದು ಗುಜರಾತ್‌ಗೆ ಹೆಚ್ಚಿನ ಬಲ ತಂದಿದೆ.
ಅಹಮದಾಬಾದ್‌ನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಟಾಸ್ ಪ್ರಕ್ರಿಯೆ ವಿಳಂಬವಾಗಿದ್ದು, ಪಂದ್ಯ ಆರಂಭ ತಡವಾಗಿದೆ. ಈಗಾಗಲೆ ಕೆಕೆಆರ್ ಪ್ಲೇಆ್ ಸ್ಥಾನ ಖಾತ್ರಿಪಡಿಸಿಕೊಂಡಿದ್ದು ಪಂದ್ಯ ರದ್ದಾದರೂ ಹೆಚ್ಚು ಯೋಚಿಸುವುದಿಲ್ಲ. ಕ್ಷೀಣ ಆಸೆ ಹೊಂದಿರುವ ಗುಜರಾತ್‌ಗೆ ಮಳೆಯಿಂದ ಪಂದ್ಯ ರದ್ದುಗೊಂಡರೆ ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ.
ಮೂರು ವರ್ಷಗಳ ಬಳಿಜಕ ಪ್ಲೇಆಫ್ಗೇರಿರುವ ಕೆಕೆಆರ್ ತಂಡ ಇನ್ನೊಂದು ಜಯದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಮುಂಬೈ ಇಂಡಿಯನ್ಸ್ ಎದುರು ಮಳೆಬಾಧಿತ ಪಂದ್ಯದಲ್ಲಿ ಜಯ ದಾಖಲಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಆಡಿರುವ 12 ಪಂದ್ಯಗಳಲ್ಲಿ 9 ಗೆಲುವು, 3 ಸೋಲಿನಿಂದಿಗೆ 18 ಅಂಕ ಕಲೆಹಾಕಿದೆ. ಅಗ್ರ 2ರಲ್ಲಿ ಸ್ಥಾನವನ್ನು ಖಾತ್ರಿಪಡಿಸಿಕೊಳ್ಳಲು ಶ್ರೇಯಸ್ ಪಡೆಗೆ ಇನ್ನೊಂದು ಜಯದ ಅನಿವಾರ‌್ಯವಿದೆ. ಇತ್ತ ಗುಜರಾತ್ ಟೈಟಾನ್ಸ್‌ಗೆ ಬಾಕಿ ಉಳಿದಿರುವ ಎಲ್ಲ ಲೀಗ್ ಪಂದ್ಯಗಳು ಡು ಆರ್ ಡೈ ಎನಿಸಿವೆ. ಇದುವರೆಗಿನ 12 ಪಂದ್ಯಗಳಲ್ಲಿ 5 ಗೆಲುವು, 7 ಸೋಲು ಕಂಡಿರುವ ಗುಜರಾತ್ ಒತ್ತಡದಲ್ಲಿ ಕಣಕ್ಕಿಳಿಯಲಿದೆ. ಜತೆಗೆ (- 1.063) ಮೈನಸ್ ರನ್‌ರೇಟ್ ಹೊಂದಿರುವುದು ದೊಡ್ಡ ಹಿನ್ನಡೆ ಎನಿಸಿದೆ. ಉಭಯ ತಂಡಗಳ ಹಿಂದಿನ 3 ಮುಖಾಮುಖಿಗಳಲ್ಲಿ ಗುಜರಾತ್ 2 ಬಾರಿ ಗೆದ್ದು ಮೇಲುಗೈ ಸಾಧಿಸಿದೆ.
ಆತ್ಮವಿಶ್ವಾಸದಲ್ಲಿ ಟೈಟಾನ್ಸ್: ಸಿಎಸ್‌ಕೆ ಎದುರು ಅಬ್ಬರಿಸಿದ ಶುಭಮಾನ್ ಗಿಲ್ ಹಾಗೂ ಸಾಯಿ ಸುದರ್ಶನ್ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಅಹಮದಾಬಾದ್‌ನಲ್ಲಿ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿರುವ ಶುಭಮಾನ್ ಮತ್ತೊಮ್ಮೆ ರನ್‌ಹೊಳೆ ಹರಿಸುವ ನಿರೀಕ್ಷೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಬ್ಯಾಟಿಂಗ್ ನಿರ್ವಹಣೆ ತೋರಬಲ್ಲ ಆಟಗಾರರ ಕೊರತೆ ತಂಡಕ್ಕಿದೆ. ಕಳೆದ ವರ್ಷ ಬೌಲಿಂಗ್‌ನಲ್ಲಿ ಪ್ರಮುಖ ಆಸ ಎನಿಸಿದ್ದ ಸ್ಪಿನ್ನರ್‌ಗಳು ಈ ಬಾರಿ ದುಬಾರಿಯಾಗಿದ್ದಾರೆ. ಮೋಹಿತ್ ಶರ್ಮ ಸಹ ಕೆಲ ಪಂದ್ಯಗಳಲ್ಲಿ ಲಯ ತಪ್ಪಿರುವುದು ಆತಂಕ ಮೂಡಿಸಿದೆ. ಪ್ಲೇಆ್ ಆಸೆ ಜೀವಂತವಿರಿಸಲು ಗುಜರಾತ್‌ಗೆ ದೊಡ್ಡ ಗೆಲುವು ಅನಿವಾರ‌್ಯ.
ಅಗ್ರ 2 ಸ್ಥಾನದ ಮೇಲೆ ದೃಷ್ಟಿ: ಮುಂಬೈ ಎದುರು ಸರ್ವಾಂರ್ಗೀಣ ನಿರ್ವಹಣೆ ತೋರಿ ಪ್ಲೇಆ್ ಸ್ಥಾನ ಖಚಿತ ಪಡಿಸಿಕೊಂಡಿರುವ ಮೊದಲ ತಂಡವಾಗಿರುವ ಕೆಕೆಆರ್‌ಗೆ, ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವುದು ಮುಂದಿನ ಸವಾಲಾಗಿದೆ. ಸನ್‌ರೈಸರ್ಸ್‌ಗೆ ಇನ್ನೂ 2 ಲೀಗ್ ಪಂದ್ಯಗಳು ಬಾಕಿಯಿದ್ದು, ಗರಿಷ್ಠ 18 ಅಂಕ ಪಡೆಯುವ ಅವಕಾಶ ಹೊಂದಿದೆ. ಟೂರ್ನಿಯ ಮೊದಲಾರ್ಧದಲ್ಲಿ ಪರಿಣಾಮಕಾರಿ ಎನಿಸದ ವರುಣ್ ಚಕ್ರವರ್ತಿ ಅಂತಿಮ ಹಂತದಲ್ಲಿ ಾರ್ಮ್‌ಗೆ ಮರಳಿರುವುದು ಕೆಕೆಆರ್ ಬೌಲಿಂಗೆಗೆ ಬಲ ಹೆಚ್ಚಿಸಿದೆ. ಗರಿಷ್ಠ ವಿಕೆಟ್ ಪಡೆದ ಅಗ್ರ 10 ಆಟಗಾರರ ಪೈಕಿ ಕೆಕೆಆರ್‌ನ ನಾಲ್ವರು ಬೌಲರ್‌ಗಳು ಸ್ಥಾನ ಪಡೆದಿದ್ದಾರೆ. ಚಕ್ರವರ್ತಿ (18), ಹರ್ಷಿತ್ ರಾಣಾ (16), ಸುನೀಲ್ ನಾರಾಯಣ್ (15), ಆಂಡ್ರೆ ರಸೆಲ್ (15) ಸಂಘಟಿತ ದಾಳಿ ಗುಜರಾತ್‌ಗೆ ಸವಾಲೆನಿಸಿದೆ. ಸುನೀಲ್ ನಾರಾಯಣ್ ಬ್ಯಾಟಿಂಗ್‌ನಲ್ಲೂ ಅಬ್ಬರಿಸುತ್ತಿರುವುದು ಕೆಕೆಆರ್‌ಗೆ ಪ್ಲಸ್ ಪಾಯಿಂಟ್.
ಮುಖಾಮುಖಿ: 3
ಗುಜರಾತ್: 2
ಕೆಕೆಆರ್: 1
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ