ವಿಜಯೇಂದ್ರ ಯುವ ಸೇನೆಯಿಂದ ಪಾದಯಾತ್ರೆ

 ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿರುವ ವಿಜಯೇಂದ್ರ ಯುವಸೇನೆಯ ಕಾರ್ಯಕರ್ತರು ಹನೂರಿನ ಮೂಲಕ ತೆರಳಿದರು.
ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿರುವ ವಿಜಯೇಂದ್ರ ಯುವಸೇನೆಯ ಕಾರ್ಯಕರ್ತರು ಹನೂರಿನ ಮೂಲಕ ತೆರಳಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆ
  • ಬಿವೈವಿ ಸಿಎಂಯಾಗಲಿ ಎಂದು ಹರಕೆ
ಹನೂರು: ಬಿ.ವೈ ವಿಜಯೇಂದ್ರ ಅವರು ಮುಖ್ಯಮಂತ್ರಿಯಾಗಲಿ ಎಂದು ಹರಕೆ ಹೊತ್ತ ವಿಜಯೇಂದ್ರ ಯುವ ಸೇನೆಯ ಕಾರ್ಯಕರ್ತರು ಶನಿವಾರ ಮಲೆಮಹದೇಶ್ವರ ಬೆಟ್ಟಕ್ಕೆ ಹನೂರಿನ ಮೂಲಕ ಪಾದಯಾತ್ರೆ ಮುಂದುವರಿಸಿದರು.
ಬೆಂಗಳೂರಿನಿಂದ ಪಾದಯಾತ್ರೆ ಆರಂಭಿಸಿದ್ದ ಕಾರ್ಯಕರ್ತರನ್ನು ಶುಕ್ರವಾರ ಸಂಜೆ ಹನೂರಿಗೆ ಆಗಮಿಸಿದ ವೇಳೆ ಬಿಜೆಪಿ ಮಂಡಲ, ಲಿಂಗಾಯತ ವೀರಶೈವ ಮಹಾಸಭಾ ಹಾಗೂ ಅಭಿಮಾನಿಗಳು ಸ್ವಾಗತಿಸಿ ಬರಮಾಡಿಕೊಂಡರು. ಬಳಿಕ ಅಲ್ಲೇ ವಾಸ್ತವ್ಯ ಹೂಡಿದ್ದ ಕಾರ್ಯಕರ್ತರು ಬೆಳಗ್ಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಿಜಯೇಂದ್ರ ಅವರ ಬಗ್ಗೆ ಜಯಘೋಷವನ್ನು ಮೊಳಗಿಸಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತವನ್ನು ಪ್ರದರ್ಶಿಸಿದರು. ಬಳಿಕ ಪಾದಯಾತ್ರೆಯನ್ನು ಮುಂದುವರಿಸಿದರು.
ಈ ವೇಳೆ ಮೂಡ್ನಾಕೂಡು ನಂದೀಶ್, ಬಿಜೆಪಿ ಮಂಡಲಾಧ್ಯಕ್ಷ ಕೆ.ಪಿ ವೃಷಭೇಂದ್ರಸ್ವಾಮಿ, ಮಾಜಿ ಅಧ್ಯಕ್ಷ ಜಗನ್ನಾಥ ನಾಯ್ಡು, ಮುಖಂಡರಾದ ಲೋಕೇಶ್ ಜತ್ತಿ, ಬಸವರಾಜಪ್ಪ, ರಂಗಧಾಮಚಾರ್, ಅರವಿಂದ್, ಮಹದೇವ, ಅನಂತಗುಪ್ತ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net