ಸಂಯೋಜಕಿ ಅನಿತಾ ಗಿರೀಶ್ ಮಾತನಾಡಿದರು. ಶಿಬಿರಾರ್ಥಿಗಳು ಮ.ಬೆಟ್ಟದ ಪ್ರಮುಖ ರಸ್ತೆಯಲ್ಲಿ ಜಾಥಾ ನಡೆಸಿ ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ದೇಗುಲದ ಆವರಣದಿಂದ ಸಾಲೂರು ಬೃಹನ್ಮಠದವರೆಗೂ ಶ್ರಮದಾನ ಮಾಡಿದರು. ವಾಸವಿ ಪಪೂ ಕಾಲೇಜಿನ ಸಂಯೋಜಕಿ ಸಪ್ನಾ ಶೇಖರ್, ಪ್ರಾಂಶುಪಾಲ ಜೆ.ರವಿಕುಮಾರ್, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಆನಂದ್, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.