ಮೊಂಡು ಬಾಲದ ಚಿರತೆ ಸಂಚಾರ

ಗುಂಡ್ಲುಪೇಟೆ ತಾಲೂಕಿನ ಮೂಡುಗೂರು ಸಮೀಪ ರಸ್ತೆ ದಾಟುತ್ತಿರುವ ಮೊಂಡು ಬಾಲದ ಚಿರತೆ.
ಗುಂಡ್ಲುಪೇಟೆ ತಾಲೂಕಿನ ಮೂಡುಗೂರು ಸಮೀಪ ರಸ್ತೆ ದಾಟುತ್ತಿರುವ ಮೊಂಡು ಬಾಲದ ಚಿರತೆ.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮಸ್ಥರಲ್ಲಿ ಹೆಚ್ಚಾದ ಆತಂಕ
ಗುಂಡ್ಲುಪೇಟೆ: ತಾಲೂಕಿನ ಮೂಡುಗೂರು ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ಬೀಡು ಬಿಟ್ಟು ಆತಂಕ ಸೃಷ್ಟಿಸಿರುವ ಚಿರತೆ ಸಂಚಾರದ ದೃಶ್ಯ ಸೆರೆಯಾಗಿದೆ.
ಈ ಭಾಗದಲ್ಲಿ ನೆಲೆಸಿರುವ ಮೊಂಡು ಬಾಲದ ಚಿರತೆ ಕೃಷಿ ಚಟುವಟಿಕೆ ನಡೆಸದೆ ಪಾಳುಬಿದ್ದಿರುವ ಜಮೀನುಗಳಲ್ಲಿ ಬೆಳೆದಿರುವ ಪೊದೆಗಳ ನಡುವೆ ಆಶ್ರಯ ಪಡೆದಿದೆ. ದೂರದಿಂದ ನೋಡಿದರೆ ಹುಲಿಯಂತೆ ಕಾಣುವ ಚಿರತೆ ರೈತರ ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಿದೆ.
ಗುರುವಾರ ಗ್ರಾಮದ ಮಹದೇವಶೆಟ್ಟಿ ಅವರ ಜಮೀನಿನಲ್ಲಿ ಮೇಯುತ್ತಿದ್ದ ಎರಡು ಹಸುಗಳನ್ನು ಕೊಂದು ಹಾಕಿತ್ತು. ಶುಕ್ರವಾರ ಮುಂಜಾನೆ ಈ ಮಾರ್ಗದಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಚಿರತೆ ಸಂಚಾರದ ವಿಡಿಯೋ ಸೆರೆ ಹಿಡಿದು ವೈರಲ್ ಮಾಡಿದ್ದಾರೆ. ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಚಿರತೆಯನ್ನು ಸೆರೆ ಹಿಡಿದು ಕಾಡಿಗೆ ಬಿಡುವಂತೆ ಸಾರ್ವಜನಿಕರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net