ಕೌದಳ್ಳಿಯಲ್ಲಿ ವಾಹನ ದಟ್ಟಣೆ

ಕೌದಳ್ಳಿ ಗ್ರಾಮದಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳು.
ಕೌದಳ್ಳಿ ಗ್ರಾಮದಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳು.
Published on
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ಮಾರ್ಗದಲ್ಲಿ ಭಾನುವಾರ ಅಧಿಕ ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ವಾಹನಗಳು ಸಂಚರಿಸಿದ್ದರಿಂದ ಕೌದಳ್ಳಿ ಗ್ರಾಮದಲ್ಲಿ ಆಗಾಗ್ಗೆ ವಾಹನ ದಟ್ಟಣೆ ಉಂಟಾಯಿತು. ಇದರಿಂದ ಭಕ್ತರು ಕಿರಿಕಿರಿ ಅನುಭವಿಸಿದರು.
ಅಮಾವಾಸ್ಯೆಗೆ ಚಾಮರಾಜನಗರ ಸೇರಿದಂತೆ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಇನ್ನಿತರ ಜಿಲ್ಲೆಗಳಿಂದ ಭಕ್ತರು, ಪ್ರವಾಸಿಗರು ಮ.ಬೆಟ್ಟಕ್ಕೆ ಆಗಮಿಸಿದ್ದರು. ಇತ್ತ ಹೆಚ್ಚುವರಿ ಸಾರಿಗೆ ಬಸ್ ಸೌಕರ್ಯ ಕಲ್ಪಿಸದ ಪರಿಣಾಮ ಭಕ್ತರು ಹೆಚ್ಚಿನ ಸಂಖ್ಯೆ ಹೆಚ್ಚಿತ್ತು. ಹಾಗಾಗಿ ಮ.ಬೆಟ್ಟ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಕಿರಿದಾದ ರಸ್ತೆಯನ್ನು ಹೊಂದಿರುವ ಕೌದಳ್ಳಿಯಲ್ಲಿ ಆಗಾಗ್ಗೆ ಸಂಚಾರ ಸಿಕ್ಕು ಆಗುತ್ತಿತ್ತು. ರಸ್ತೆಯ 2 ಬದಿಯಲ್ಲೂ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಇದರಿಂದ ಮಾದಪ್ಪನ ಭಕ್ತರು ಕಿರಿಕಿರಿ ಅನುಭವಿಸಿದರು. ಗ್ರಾಮದ ವೃತ್ತದಲ್ಲಿ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಹರಸಹಾಸಪಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net