ಬೆಳ್ಳುಳ್ಳಿ ಕದ್ದ ಕಳ್ಳರು

ಗುಂಡ್ಲುಪೇಟೆ ತಾಲೂಕಿನ ಭೀಮಬೀಡು ಗ್ರಾಮದ ಸಿದ್ದರಾಜು ಅವರ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಬೆಳ್ಳುಳ್ಳಿ ಕಳ್ಳತನವಾಗಿದೆ.
ಗುಂಡ್ಲುಪೇಟೆ ತಾಲೂಕಿನ ಭೀಮಬೀಡು ಗ್ರಾಮದ ಸಿದ್ದರಾಜು ಅವರ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಬೆಳ್ಳುಳ್ಳಿ ಕಳ್ಳತನವಾಗಿದೆ.
Published on

ಗುಂಡ್ಲುಪೇಟೆ:

ರೈತರ ಜಮೀನುಗಳಲ್ಲಿ ಸಾಗುವಾನಿ ಮರ, ಪಂಪ್‌ಸೆಟ್ ಮೋಟಾರ್ ಮತ್ತು ಕೇಬಲ್ ಕಳ್ಳತನದ ಜತೆ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಿರುವ ಬೆಳ್ಳುಳ್ಳಿ ಮೇಲೆಯೂ ಕಳ್ಳರು ಕಣ್ಣುಬಿದ್ದಿದೆ.

ಭೀಮನಬೀಡು ಗ್ರಾಮದ ರೈತ ಸಿದ್ದರಾಜು ಅವರ ಜಮೀನಿನಲ್ಲಿ ಬೆಳೆದಿದ್ದ ಬೆಳ್ಳುಳ್ಳಿಯನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳ್ಳುಳ್ಳಿ ಬೆಳೆ ಕಟಾವು ಹಂತದಲ್ಲಿತ್ತು.
ಭಾನುವಾರ ಕಳ್ಳರು ರಾತ್ರಿ ವೇಳೆ ಜಮೀನಿಗೆ ನುಗ್ಗಿ ಸುಮಾರು ಹತ್ತು ಮೂಟೆಯಷ್ಟು ಬೆಳ್ಳುಳ್ಳಿಯನ್ನು ಕದ್ದಿದ್ದಾರೆ. ಇದರಿಂದ ರೈತರಿಗೆ ತೀವ್ರ ನಷ್ಟವಾಗಿದೆ. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net