ಶೀಘ್ರದಲ್ಲಿ ನೀರಿನ ಸಮಸ್ಯೆ ನೀಗಿಸಿ

ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಸಾರ್ವಜನಿಕರು ಮೌಖಿಕವಾಗಿ ದೂರು ನೀಡಿದರು. ಪಿಡಿಒ ಶಾರದಾದೇವಿ, ಆಡಳಿತಾಧಿಕಾರಿ ಮಾನಸಾ ಇತರರು ಇದ್ದರು.
ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಸಾರ್ವಜನಿಕರು ಮೌಖಿಕವಾಗಿ ದೂರು ನೀಡಿದರು. ಪಿಡಿಒ ಶಾರದಾದೇವಿ, ಆಡಳಿತಾಧಿಕಾರಿ ಮಾನಸಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಿಡಿಒ ಶಾರದಾದೇವಿಗೆ ಗ್ರಾಮಸ್ಥರ ಮನವಿ
  • ಸಾಮಾಜಿಕ ಪರಿಶೋಧನಾ ಮತ್ತು 15ನೇ ಹಣಕಾಸು ಗ್ರಾಮಸಭೆ

ಯಳಂದೂರು:

ತಾಲೂಕಿನ ಗೌಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಡಗೆರೆ, ರಾಮಾಪುರ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ. ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮಸ್ಯೆ ನೀಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಗೌಡಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾಜಿಕ ಪರಿಶೋಧನಾ ಮತ್ತು 15ನೇ ಹಣಕಾಸು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಪಿಡಿಒಗೆ ದೂರು ನೀಡಿದರು.
ಗ್ರಾಮಗಳಲ್ಲಿ ನೀರು ಸರಿಯಾಗಿ ಬರುತ್ತಿಲ್ಲ. ಹಲವು ಕಡೆ ಮೋಟಾರ್ ಕೆಟ್ಟಿದೆ. ಸಾರ್ವಜನಿಕ ನೆಲ್ಲಿಗಳೂ ಸರಿಯಿಲ್ಲ. ಗ್ರಾಮದಲ್ಲಿ ನೀರಿನ ನಿರ್ವಹಣೆ ಮಾಡುವ ಸಿಬ್ಬಂದಿ ನಿರ್ಲಕ್ಷೃ ವಹಿಸಿದ್ದಾರೆ. ಈಗ ಹಬ್ಬಗಳು ಬರುತ್ತಿದ್ದು ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪಿಡಿಒ ಶಾರದಾದೇವಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುತ್ತೇನೆ. ಸಭೆ ನಂತರ ಗ್ರಾಮಗಳಿಗೆ ಭೇಟಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಲೆಕ್ಕ ಪರಿಶೋಧಕ ಪ್ರಸನ್ನ ಮಾತನಾಡಿ, ಕಳೆದ ಅವಧಿಯಲ್ಲಿ ಒಟ್ಟು 170 ಕಾಮಗಾರಿಗಳು ನಡೆದಿವೆ. ಇದರಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ 138, ತೋಟಗಾರಿಕೆ ಇಲಾಖೆಯ 2, ಅರಣ್ಯ ಇಲಾಖೆಯ 3 ಹಾಗೂ ಕೃಷಿ ಇಲಾಖೆಯ 7 ಕಾಮಗಾರಿಗಳು ಸೇರಿವೆ. 58.97 ಲಕ್ಷ ರೂ. ಕಾಮಗಾರಿಗೆ ಬಳಕೆ ಮಾಡಲಾಗಿದೆ. ಜಿ ರಾಮ್‌ಜಿ ಯೋಜನೆಯಡಿಯಲ್ಲಿ ಅನೇಕ ಕೆಲಸಗಳನ್ನು ಮಾಡಲು ಅವಕಾಶವಿದ್ದು, ಸಾರ್ವಜನಿಕರು ಜಾಬ್ ಕಾರ್ಡ್‌ಗಳನ್ನು ಮಾಡಿಸಿಕೊಂಡು ವೈಯುಕ್ತಿಕ ಹಾಗೂ ಸಾಮೂಹಿಕ ಕಾರ್ಯಗಳನ್ನು ಮಾಡಿಸಿಕೊಳ್ಳುವ ಅವಕಾಶವಿದ್ದು ಇದರ ಬಳಕೆಯನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಿಡಿಒ ಶಾರದಾದೇವಿ, ಆಡಳಿತಾಧಿಕಾರಿ ಮಾನಸಾ, ಜೆಇ ಮಲ್ಲಿಕ್ ತೋಟಗಾರಿಕಾ ಇಲಾಖೆಯ ವೀಣಾ, ರೇಷ್ಮೆ ಇಲಾಖೆಯ ನೂತನ್, ಬಿಲ್ ಕಲೆಕ್ಟರ್ ಶಂಕರನಾಯಕ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net