ಸ್ಥಗಿತಗೊಂಡಿರುವ ಪಿಂಚಣಿ ಮರು ಆರಂಭಿಸಿ

ಪಿಂಚಣಿ ಹಣ ನೀಡುವಂತೆ ಒತ್ತಾಯಿಸಿ ಫಲಾನುಭವಿಗಳು ಗ್ರೇಡ್ -2 ತಹಸೀಲ್ದಾರ್ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು. ಕೆ.ಪಿ.ವೃಷಭೇಂದ್ರಸ್ವಾಮಿ, ಸಾಕಮ್ಮ, ಸಿದ್ದಮ್ಮ, ಸರೋಜಮ್ಮ, ತುಳಸಮ್ಮ ಇತರರಿದ್ದರು.
ಪಿಂಚಣಿ ಹಣ ನೀಡುವಂತೆ ಒತ್ತಾಯಿಸಿ ಫಲಾನುಭವಿಗಳು ಗ್ರೇಡ್ -2 ತಹಸೀಲ್ದಾರ್ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು. ಕೆ.ಪಿ.ವೃಷಭೇಂದ್ರಸ್ವಾಮಿ, ಸಾಕಮ್ಮ, ಸಿದ್ದಮ್ಮ, ಸರೋಜಮ್ಮ, ತುಳಸಮ್ಮ ಇತರರಿದ್ದರು.
Published on
ಹನೂರು: ಸಾಮಾಜಿಕ ಭದ್ರತಾ ಯೋಜನೆಯಡಿ ಸ್ಥಗಿತಗೊಂಡಿರುವ ಪಿಂಚಣಿ ಮರು ಆರಂಭಿಸುವಂತೆ ಹಾಗೂ ಮೊತ್ತ ಹೆಚ್ಚಿಸುವಂತೆ ಒತ್ತಾಯಿಸಿ ಮಂಗಳವಾರ ಗ್ರೇಡ್ 2 ತಹಸೀಲ್ದಾರ್ ಪ್ರಕಾಶ್ ಅವರಿಗೆ ಫಲಾನುಭವಿಗಳು ಮನವಿ ಸಲ್ಲಿಸಿದರು.
ತಾಲೂಕಿನ ಬಂಡಳ್ಳಿ ಗ್ರಾಮದ ಸುಮಾರು 40 ಮಹಿಳಾ ಫಲಾನುಭವಿಗಳು ಬೆಳಗ್ಗೆ ತಹಸೀಲ್ದಾರ್ ಕಚೇರಿ ಆವರಣಕ್ಕೆ ಆಗಮಿಸಿದ್ದರು. ಈ ಬಗ್ಗೆ ವೃಷಭೇಂದ್ರಸ್ವಾಮಿ ಫಲಾನುಭವಿಗಳನ್ನು ವಿಚಾರಿಸಿದಾಗ ಕೆಲವರಿಗೆ 1,200 ರೂ.ಪಿಂಚಣಿ, 65 ವರ್ಷ ಮೇಲ್ಪಟ್ಟವರಿಗೆ 600, 800 ರೂ.ಪಿಂಚಣಿ ಬರುತ್ತಿದೆ. ಕೆಲವರಿಗೆ ಪಿಂಚಣಿ ಹಣ ಸ್ಥಗಿತಗೊಂಡಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಬಗ್ಗೆ ಸಂಬಂಧಪಟ್ಟವರನ್ನು ವಿಚಾರಿಸಿದರೆ ಸ್ಪಂದಿಸುತ್ತಿಲ್ಲ. ಜೀವನ ನಡೆಸುವುದು ಕಷ್ಟವಾಗಿದೆ. ಆದ್ದರಿಂದ ಪಿಂಚಣಿ ಹಣ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂಬಂಧ ವೃಷಭೇಂದ್ರಸ್ವಾಮಿ, ಗ್ರೇಡ್ 2 ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಬಂಡಳ್ಳಿ ಗ್ರಾಮದಲ್ಲಷ್ಟೇ ಅಲ್ಲ ತಾಲೂಕಿನಲ್ಲಿ ಕೆಲವರಿಗೆ ಬರುತ್ತಿದ್ದ ಪಿಂಚಣಿ ಹಣ ಸ್ಥಗಿತವಾಗಿದೆ. ಕೆಲವರಿಗೆ ವಯಸ್ಸಾದರೂ ಹೆಚ್ಚಿನ ಪಿಂಚಣಿ ಹಣ ಬರುತ್ತಿಲ್ಲ. ಆದ್ದರಿಂದ ಈ ಬಗ್ಗೆ ಮುತುರ್ವಜಿ ವಹಿಸಿ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಕೋರಿದರು.
ಇದಕ್ಕೆ ಗ್ರೇಡ್ 2 ತಹಸೀಲ್ದಾರ್ ಪ್ರಕಾಶ್ ಪ್ರತಿಕ್ರಿಯಿಸಿ, ಕೆಲ ಕಾರಣದಿಂದ ಹಲವರಿಗೆ ಪಿಂಚಣಿ ಸ್ಥಗಿತಗೊಂಡಿದ್ದು ಅಗತ್ಯ ದಾಖಲೆ ನೀಡಬೇಕಿದೆ. ಇನ್ನು ಆರ್ಹ ಫಲಾನುಭವಿಗಳು ಹೆಚ್ಚಿನ ಪಿಂಚಣಿ ಹಣ ಪಡೆಯಬೇಕಾದರೆ ಹಿಂದಿನ ಮಂಜೂರಾತಿ ಆದೇಶದ ಪ್ರತಿ ಹಾಗೂ ಅಗತ್ಯ ದಾಖಲೆಗಳನ್ನು ಗ್ರಾಮ ಆಡಳಿತಾಧಿಕಾರಿಗೆ ನೀಡಿದರೆ ಪರಿಶೀಲಿಸಿ ಈ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.
ಫಲಾನುಭವಿಗಳಾದ ವೆಂಕಟಮ್ಮ, ಸರೋಜಮ್ಮ, ಸಾಕಮ್ಮ, ತುಳಸಮ್ಮ, ಸಿದ್ದಮ್ಮ, ಮುತ್ತ ಬಸಮ್ಮ, ವೆಂಕಟರಾಜಮ್ಮ, ಪುಟ್ಟಸಿದ್ದಮ್ಮ, ಲಕ್ಷ್ಮಮ್ಮ, ನಂಜಮ್ಮ, ಮಲ್ಲಾಜಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net