ಕೊಳ್ಳೇಗಾಲ: ಪಟ್ಟಣದ ವಿಸ್ಡಮ್ ವಿದ್ಯಾ ಸಂಸ್ಥೆಯಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಂಸ್ಥೆಯ ಟ್ರಸ್ಟಿ ಮಧು ಮಲ್ಲೇಶ್ ಅವರು ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಸಂಸ್ಥೆಯ ಟ್ರಸ್ಟಿ ಮಧು ಮಲ್ಲೇಶ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದಿಂದ ನಮಗೆಲ್ಲರಿಗೂ ಸಮಾನತೆ ದೊರೆತಿದೆ. ವಿದ್ಯಾರ್ಥಿಗಳು ಸಂವಿಧಾನವನ್ನು ಓದಬೇಕು. ಸಂವಿಧಾನದ ಆಶಯವನ್ನು ತಿಳಿಯಬೇಕು ಕಿವಿಮಾತು ಹೇಳಿದರು.
ಈ ವೇಳೆ ನೃತ್ಯ, ಗೀತೆ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಶಾಲೆಯಲ್ಲಿ ಇತ್ತೀಚೆಗೆ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿಲಾಯಿತು. ಗಣರಾಜ್ಯೋತ್ಸವ ಅಂಗವಾಗಿ ಪಾಲಕರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ವಿಸ್ಡಮ್ ವಿದ್ಯಾ ಸಂಸ್ಥೆ ಪ್ರಾಂಶುಪಾಲೆ ಭ್ರಮರಾಂಬ, ಶಿಕ್ಷಕರಾದ ಮಮತಾ, ಮಂಜುಳಾ, ಚರಿತಾ, ರೂಹಿನ್ ತಾಜ್, ಸುರೇಂದ್ರ, ಸಿದ್ದಪ್ಪಾಜಿ, ಅಲೆಕ್ಸ್, ಸಬಾಸ್ಟಿನ್, ನಂದಿನಿ, ಚಂದ್ರು, ಸುನೀಲ್, ವಾಣಿ, ನೇಹಾ, ಲೋಕಮಾತಾ, ಚಂದನ, ಲಾವಣ್ಯಾ, ಶಾಂತಿ ಇತರರು ಇದ್ದರು.