ಕಳ್ಳರು ಬ್ಯಾಂಕ್‌ನ ಬಾಗಿಲು ಹಾಗೂ ಬೀರುವಿನ ಬೀಗ ಮುರಿದು ಸಾಲಗಾರರಿಂದ ವಸೂಲಿ ಮಾಡಿಟ್ಟಿದ್ದ 14.6 ಲಕ್ಷ ರೂ.ನಗದು ಕಳ್ಳತನ ಮಾಡಿದ್ದಾರೆ ಎಂದು ಬ್ಯಾಂಕ್ ಮುಖ್ಯಕಾರ್ಯನಿರ್ವಾಹಕ ಚಂದ್ರಶೇಖರ ಮೂರ್ತಿ ಡಿ.17ರಂದು ಪೊಲೀಸರಿಗೆ ದೂರು ನೀಡಿದ್ದರು. ವಿಷಯ ತಿಳಿದ ಕೂಡಲೇ ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಡಿವೈಎಸ್‌ಪಿ ಸ್ನೇಹರಾಜ್ ಭೇಟಿ ನೀಡಿದ್ದರು.