ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗುತ್ತಿಗೆದಾರರಿಗೆ ಕಾಮಗಾರಿ ಟೆಂಡರ್ ಕೊಡುವ ಬದಲು ಕಮಿಷನ್ ಪಡೆದು ಮಂಡ್ಯ, ಮೈಸೂರು, ಬೆಂಗಳೂರು ಮೂಲದವರಿಗೆ ಗುತ್ತಿಗೆ ನೀಡುತ್ತಿದ್ದಾರೆ. ಮೂರು ವರ್ಷಗಳಿಂದ ತಾಂತ್ರಿಕ ದೋಷ ನೆಪದಲ್ಲಿ ಕೆರೆಗಳಿಗೆ ನೀರು ತುಂಬಿಸದೆ ನೆಪ ಹೇಳಲು ನಾಚಿಕೆ ಆಗಬೇಕು. ಕ್ಷೇತ್ರದ ಜನತೆ ನಿಮ್ಮನ್ನು ಆಯ್ಕೆ ಮಾಡಿರುವುದು ಕೇರಳಕ್ಕೆ ಪ್ರತಿದಿನ 200-300 ಲಾರಿಗಳಲ್ಲಿ ಕಲ್ಲು ಸಾಗಣೆ, ಅಕ್ರಮ ಲಾಟರಿ ಮಾರಾಟ, ಅನ್ನಭಾಗ್ಯ ಅಕ್ಕಿ ಸಾಗಣೆ, ಗಾಂಜಾ ಮಾರಾಟಕ್ಕೆ ಕುಮ್ಮಕ್ಕು ಕೊಡಲು ಅಲ್ಲ ಎಂದು ದೂರಿದರು.