ಪಟ್ಟಣದಲ್ಲಿ ಮುಕ್ತ ಸಾಹಿತ್ಯ ವೇದಿಕೆ ವತಿಯಿಂದ ಭಾನುವಾರ ದಶಮಾನೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವೇದಿಕೆಯ ಸಂಸ್ಥಾಪಕಿ ಡಾ.ಜಿ.ಸುಧಾ, ಅಧ್ಯಕ್ಷೆ ಎಂ.ಎಸ್.ವಿಜಯಲಕ್ಷ್ಮೀ, ಕಾರ್ಯದರ್ಶಿ ಗೀತಾ, ಖಜಾಂಚಿ ಜಯದೇವಿ ಅವರು ದಶಮಾನೋತ್ಸವದ ಬ್ಯಾನರ್ ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆ ಸಂಸ್ಥಾಪಕಿ ಡಾ.ಜಿ.ಸುಧಾ ಮಾತನಾಡಿ, ಹತ್ತು ವರ್ಷಗಳ ಹಿಂದೆ ವೇದಿ ಕೆಯನ್ನು ಆರಂಭಿಸಿದ ಸಂದರ್ಭ ಮತ್ತು ಅಲ್ಲಿಂದಾಚೆಗೆ ನಡೆದ ಚಟುವಟಿಕೆಯಿಂದ ಸದಸ್ಯೆಯರು ಬೆಳೆದ ರೀತಿಯನ್ನು ವಿವರಿಸಿದರಲ್ಲದೆ, ತಮಗಾಗಿ ಕೆಲ ಸಮಯ ಮೀಸಲಿಟ್ಟು ಪ್ರತಿಯೊಬ್ಬ ಮಹಿಳೆಯು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬೇಕು. ಅದಕ್ಕೆ ಸಾಹಿತ್ಯ ಚಟುವಟಿಕೆ ಅವಶ್ಯ ಎಂದರು.
ಬಳಿಕ ಸದಸ್ಯರೆಲ್ಲರೂ ವಿಜಯಾದಬ್ಬೆ ಅವರ ‘ತೂರಬೇಡಿ ಗಾಳಿಗೆ ಹೆಣ್ತನದ ಘನತೆಯ’ಎಂಬ ಆಶಯ ಗೀತೆಯನ್ನು ಹಾಡಿದರು.
ವೇದಿಕೆ ಪದಾಧಿಕಾರಿಗಳಾದ ವಿಜಯಲಕ್ಷ್ಮೀ, ಗೀತಾ, ಅನುಪಮಾ, ರೂಪಾ, ವಾಣಿ, ಪ್ರಮೀಳಾ, ಚಂದ್ರಕಲಾ ಮತ್ತಿತರಿದ್ದರು.