ಗೋಪಿಶೆಟ್ಟಿಯೂರಿನಲ್ಲಿ ಬಸವ ಜಯಂತಿ ಆಚರಣೆ

 ಗೋಪಿಶೆಟ್ಟಿಯೂರು ಗ್ರಾಮದಲ್ಲಿ ಬಸವ ಜಯಂತಿ ಹಿನ್ನೆಲೆ ಬಸವೇಶ್ವರರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು.  ಜ್ಞಾನಶೇಖರ್, ಗುಣಶೇಖರ್, ಬಸವರಾಜು, ಗಜೇಂದ್ರ ಇತರರಿದ್ದರು.
ಗೋಪಿಶೆಟ್ಟಿಯೂರು ಗ್ರಾಮದಲ್ಲಿ ಬಸವ ಜಯಂತಿ ಹಿನ್ನೆಲೆ ಬಸವೇಶ್ವರರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಜ್ಞಾನಶೇಖರ್, ಗುಣಶೇಖರ್, ಬಸವರಾಜು, ಗಜೇಂದ್ರ ಇತರರಿದ್ದರು.
Published on
ಹನೂರು: ತಾಲೂಕಿನ ರಾಮಾಪುರ ಸಮೀಪದ ಗೋಪಿಶೆಟ್ಟಿಯೂರು ಗ್ರಾಮದಲ್ಲಿ ಸೋಮವಾರ ಮೆರವಣಿಗೆ ನಡೆಸುವ ಮೂಲಕ ಬಸವ ಜಯಂತಿಯನ್ನು ಆಚರಿಸಲಾಯಿತು.
ಜಯಂತಿಯ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು- ತೋರಣದಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ 10.30ರಲ್ಲಿ ಗ್ರಾಮದ ಶ್ರೀಗುರುಮಲ್ಲೇಶ್ವರ ದಾಸೋಹ ಮಠದ ಶ್ರೀಸೋಮಶೇಖರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸುತ್ತೂರು ಶಾಖಾ ಮಠದ ಶ್ರೀಬಸವಣ್ಣ ಸ್ವಾಮೀಜಿ ಅವರಿಗೆ ಪಾದಪೂಜೆ ನೆರವೇರಿಸಲಾಯಿತು.
ಅಕ್ಕನ ಬಳಗದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಸಂಜೆ 6ರ ವೇಳೆಯಲ್ಲಿ ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ತೆರೆದ ವಾಹನದಲ್ಲಿ ಬಸವೇಶ್ವರರ ಭಾವಚಿತ್ರವನ್ನು ಇರಿಸಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಶ್ರೀಮಠದ ಮುಂಭಾಗದಿಂದ ವಾದ್ಯಮೇಳ ಹಾಗೂ ಗ್ರಾಮಸ್ಥರೊಂದಿಗೆ ಹೊರಟ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ಯುವಕರು ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿದರು.
ಗ್ರಾಮದ ಮುಖಂಡರಾದ ಬಸವರಾಜು, ಗಜೇಂದ್ರ, ನಂದೀಶ್, ಪ್ರಭಾಕರ್, ಯಾದವ್, ಜ್ಞಾನಶೇಖರ್, ಗುಣಶೇಖರ್, ಸೋಮಶೇಖರ್ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net