ಬಸ್ ಪಟ್ಟಣದ ಸಾರಿಗೆ ನಿಲ್ದಾಣದಲ್ಲಿ ನಿಲ್ಲಿಸಿದ್ದ ಮೈಸೂರಿನಿಂದ ಕೇರಳದ ಕ್ಯಾಲಿಕಟ್‌ಗೆ ಹೋಗಿ ಶನಿವಾರ ವಾಪಸ್ಸಾಗುತ್ತಿದ್ದ ಬಸ್ ಸ್ಟಾರ್ಟ್ ಆಗದ ಹಿನ್ನೆಲೆಯಲ್ಲಿ ಕಂಡಕ್ಟರ್ ನಿಲ್ದಾಣದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಗೋಗರೆದು ನೂಕಿಸಿದರು. ಸುಸ್ಥಿತಿಯಲ್ಲಿಲ್ಲದ ಬಸ್‌ನ್ನು ಅಂತಾರಾಜ್ಯ ಪ್ರಯಾಣಕ್ಕೆ ನಿಯೋಜನೆ ಮಾಡಿರುವ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಪ್ರಯಾಣಿಕರು ಹಾಗೂ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.