ವಿಜ್ಞಾನಿಗಿಂತಲೂ ರೈತರ ಅನುಭವ ಅಗಾಧ

ಯಳಂದೂರು ಸಮೀಪದ ಉಮ್ಮತ್ತೂರು ಗ್ರಾಮದಲ್ಲಿ ಆಯೋಜಿಸಿದ್ದ ಅಂತಿಮ ಬಿಎಸ್‌ಸಿ ವಿದ್ಯಾರ್ಥಿಗಳು ಗ್ರಾಮೀಣ ಸಹಭಾಗಿತ್ವ ಅಧ್ಯಯನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಚಿಸಿದ್ದ ವಿವಿಧ ಮಾದರಿಗಳನ್ನು ರೈತರು ವೀಕ್ಷಿಸಿದರು. ರೈತ ಮುಖಂಡರಾದ ಪ್ರಭುಸ್ವಾಮಿ, ಲಿಂಗರಾಜು, ಕೃಷಿ ವಿವಿಯ ಡಾ.ದೇವರಾಜು, ಡಾ.ಬಿಎಸ್.ಪವಿತ್ರಾ, ಕೃಷಿ ವಿವಿಯ ವಿದ್ಯಾರ್ಥಿಗಳು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕ ಡಾ.ಜಿ.ನಾಗೇಶ ಅಭಿಪ್ರಾಯ
  • ರೈತರೊಂದಿಗೆ ಕೃಷಿ ವಿಚಾರ ವಿನಿಮಯ

ಯಳಂದೂರು:

ಸಮೀಪದ ಉಮ್ಮತ್ತೂರು ಗ್ರಾಮದಲ್ಲಿ ಇತ್ತೀಚೆಗೆ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವ ಚಾಮರಾಜನಗರ ಕೃಷಿ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ಬಿಎಸ್ಸಿ ವಿದ್ಯಾರ್ಥಿಗಳು ಗ್ರಾಮೀಣ ಸಹಭಾಗಿತ್ವ ಅಧ್ಯಯನ ಕಾರ್ಯಕ್ರಮ ನಡೆಯಿತು. ಈ ವೇಳೆ ಸ್ಥಳೀಯ ರೈತರೊಂದಿಗೆ ವಿದ್ಯಾರ್ಥಿಗಳು ಕೃಷಿ ವಿಚಾರ ವಿನಿಮಯ ಮಾಡಿಕೊಂಡರು.

ಗ್ರಾಮದಲ್ಲಿ ಸಾಮಾಜಿಕ ಸಂಪನ್ಮೂಲಗಳ ನಕ್ಷೆ, ಬೆಳೆ, ಪಶು ಸಂಪತ್ತು ಪಿರಮಿಡ್, ಮಣ್ಣಿನ ವಿಧಗಳು, ಸಂಚಾರ ನಕ್ಷೆ, ಋತುಮಾನ ನಕ್ಷೆ, ರೈತನ ದಿನಚರಿ ಹಾಗೂ ಸಮಸ್ಯೆ-ಪರಿಹಾರ ವೃಕ್ಷ ಸೇರಿದಂತೆ ವಿವಿಧ ಮಾದರಿಗಳನ್ನು ವರ್ಣರಂಜಿತವಾಗಿ ನೆಲದ ಮೇಲೆ ಬಿಡಿಸಿ ರೈತರಿಗೆ ಅರಿವು ಮೂಡಿದರು.
ಶಿಬಿರದ ಸಂಯೋಜಕ ಪ್ರಾಧ್ಯಾಪಕ ಡಾ.ಜಿ.ನಾಗೇಶ ಮಾತನಾಡಿ, ಕೃಷಿ ಪ್ರಧಾನವಾಗಿರುವ ನಮ್ಮ ದೇಶದಲ್ಲಿ ರೈತರ ಅನುಭವ ವಿಜ್ಞಾನಿಗಳಿಗಿಂತಲೂ ಅಗಾಧವಾಗಿದೆ. ಕೃಷಿಯಲ್ಲಿ ಬೆಳೆಗಳ ಬಗ್ಗೆ ವಿದ್ಯಾರ್ಥಿಗಳು ಆಲಿಸಬೇಕು. ಇದರಲ್ಲಿರುವ ವೈಜ್ಞಾನಿಕ ಅಂಶಗಳನ್ನು ಬರೆದಿಟ್ಟುಕೊಳ್ಳಬೇಕು. ಅಧುನಿಕ ಕೃಷಿ ಪದ್ಧತಿಯಲ್ಲಿ ಯಾವ್ಯಾವ ಅಂಶಗಳನ್ನು ಸೇರಿಸಿಕೊಳ್ಳಬೇಕು. ಇದರಿಂದ ಆಗುವ ಪ್ರಯೋಜನಗಳು ಸೇರಿದಂತೆ ಅನೇಕ ವಿಷಯಗಳನ್ನು ಇದರಿಂದ ಅರ್ಥೈಸಿಕೊಳ್ಳಬಹುದು. ಹಾಗಾಗಿ ರೈತರೊಂದಿಗೆ ವಿದ್ಯಾರ್ಥಿಗಳು ಬೆರೆತು ಗ್ರಾಮದ ಸಾಮಾಜಿಕ ಆರ್ಥಿಕ ಹಾಗೂ ಕೃಷಿ ಪರಿಸರ ಅರಿಯಬೇಕು ಎಂದರು.
ರೈತ ಮುಖಂಡರಾದ ಪ್ರಭುಸ್ವಾಮಿ, ಲಿಂಗರಾಜು, ಕೃಷಿ ವಿವಿಯ ಡಾ.ದೇವರಾಜು, ಡಾ.ಬಿಎಸ್.ಪವಿತ್ರಾ, ಕೃಷಿ ವಿವಿಯ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net