ಜೋಡಿ ರಸ್ತೆ ನಿರ್ಮಾಣಕ್ಕೆ ಡ್ರೋನ್ ಸರ್ವೇ

ಕೊಳ್ಳೇಗಾಲದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮತ್ತು ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಮೈಸೂರಿನ ಕೌಶಿಕ್ ಕನ್ಸಲ್‌ಟೆಂಟ್ ತಜ್ಞರ ಜತೆಗೂಡಿ ನಗರಸಭೆ ಅಧಿಕಾರಿಗಳು ಡ್ರೋನ್ ಸರ್ವೇ ನಡೆಸಿದರು.
ಕೊಳ್ಳೇಗಾಲದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮತ್ತು ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಮೈಸೂರಿನ ಕೌಶಿಕ್ ಕನ್ಸಲ್‌ಟೆಂಟ್ ತಜ್ಞರ ಜತೆಗೂಡಿ ನಗರಸಭೆ ಅಧಿಕಾರಿಗಳು ಡ್ರೋನ್ ಸರ್ವೇ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮತ್ತು ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಸರ್ವೇ
ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದಲ್ಲಿ ಜೋಡಿ ರಸ್ತೆ ನಿರ್ಮಾಣ ಮಾಡುವ ಸಂಬಂಧ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮತ್ತು ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಮೈಸೂರಿನ ಕೌಶಿಕ್ ಕನ್ಸಲ್‌ಟೆಂಟ್ ತಜ್ಞರ ಜತೆಗೂಡಿ ನಗರಸಭೆ ಅಧಿಕಾರಿಗಳು ಡ್ರೋನ್ ಸರ್ವೇ ನಡೆಸಿದರು.
ಈ ಬಗ್ಗೆ ನಗರಸಭೆ ಪ್ರಭಾರ ಪೌರಾಯುಕ್ತ ನಟರಾಜ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮತ್ತು ಡಾ.ರಾಜ್ ಕುಮಾರ್ ರಸ್ತೆಯಲ್ಲಿ 166 ಆಸ್ತಿಗಳಿವೆ. ಸದ್ಯ ಆಸ್ತಿಗಳ ಅಳತೆ ಕಾರ್ಯ ನಡೆಯುತ್ತಿದೆ.
ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ತಿಗಳನ್ನು ಗುರುತಿಸಲಾಗುತ್ತಿದೆ. ಮುಂದೆ ನಗರಸಭೆಯ ದಾಖಲೆಗಳನ್ನು ಪರಿಶೀಲಿಸಿ ಪರಿಹಾರ ನೀಡುವುದು ಮತ್ತು ಒತ್ತುವರಿ ಗುರುತಿಸುವ ಕಾರ್ಯ ನಡೆಯಲಿದೆ. ಎರಡು ರಸ್ತೆ ವಿಸ್ತರಣೆಗೆ ಮೈಸೂರಿನ ಕೌಶಿಕ್ ಕನ್ಸಲ್ ಟೆಂಟ್ ಎಜೆನ್ಸಿಯ ತಜ್ಞರು ಸರ್ವೇ ಕಾರ್ಯ ಆರಂಭಿಸಿದ್ದಾರೆ. ಒಂದುವರೆ ತಿಂಗಳಲ್ಲಿ ಸರ್ವೇ ಪೂರ್ಣಗೊಳ್ಳಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net