ವೇತನ ಮಂಜೂರು ಮಾಡಲು ಚಾಲಕರು ಮನವಿ

ಕಳೆದ 4 ತಿಂಗಳಿನಿಂದ ಸಂಬಳವಾಗದೆ ಜೀವನ ನಿರ್ವಹಣೆಗೆ ಸಮಸ್ಯೆ ಉಂಟಾಗಿದೆ ಎಂದು ನಗರಸಭೆ ಸ್ವಚ್ಛತಾ ವಾಹನಗಳ ಚಾಲಕರು ಗುರುವಾರ ನಗರಸಭೆ ಪ್ರಭಾರ ಪೌರಾಯುಕ್ತ ನಟರಾಜ್ ಅವರ ಬಳಿ ಅಳಲು ತೋಡಿಕೊಂಡರು. ನಾಗರಾಜು, ಶಿವಕುಮಾರ್, ಶ್ರೀಧರ್, ನಾಗೇಂದ್ರ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ನಗರಸಭೆ ಪ್ರಭಾರ ಪೌರಾಯುಕ್ತ ನಟರಾಜ್ ಬಳಿ ಅಳಲು
ಕೊಳ್ಳೇಗಾಲ: ಕಳೆದ 4 ತಿಂಗಳಿನಿಂದ ಸಂಬಳವಾಗದೆ ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ ಎಂದು ನಗರಸಭೆ ಸ್ವಚ್ಛತಾ ವಾಹನಗಳ ಚಾಲಕರು (ಹೊರಗುತ್ತಿಗೆ ನೌಕರರು) ನಗರಸಭೆ ಪ್ರಭಾರ ಪೌರಾಯುಕ್ತ ನಟರಾಜ್ ಅವರ ಬಳಿ ಗುರುವಾರ ಅಳಲು ತೋಡಿಕೊಂಡರು.
ಕೊಳ್ಳೇಗಾಲ ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನಗರಸಭೆಗೆ ಸೇರಿದ ಟ್ರಾೃಕ್ಟರ್, ಕಸ ಸಂಗ್ರಹ ವಾಹನ ಚಲಾಯಿಸುವ 22 ನೌಕರರಿದ್ದು. ಇವರಿಗೆ ಕಳೆದ 4 ತಿಂಗಳಿನಿಂದ ಸಂಬಳವಾಗಿಲ್ಲ. ಈ ಹಿನ್ನೆಲೆಯಲ್ಲಿ ಪೌರಾಯುಕ್ತ ನಟರಾಜು ಅವರನ್ನು ಭೇಟಿ ಮಾಡಿ ವೇತನ ಬಿಡುಗಡೆ ಮಾಡಿಸುವಂತೆ ಮನವಿ ಮಾಡಿದರು.
ಈ ಬಗ್ಗೆ ನಗರಸಭೆ ಪೌರಾಯುಕ್ತ ನಟರಾಜು ಮಾತನಾಡಿ, ನಗರಸಭೆಯಲ್ಲಿ ವಸೂಲಾತಿ ಕುಂಠಿತವಾಗಿರುವುದರಿಂದ ಹೊರಗುತ್ತಿಗೆ ನೌಕರರಿಗೆ ಸಂಬಳ ನೀಡುವ ಹಿಂದೂಸ್ಥಾನ್ ಸೆಕ್ಯೂರಿಟಿ ಸರ್ವಿಸ್‌ಗೆ ನಗರಸಭೆ ಹಣ ನೀಡಲು ವಿಳಂಬವಾಗಿದೆ. ಹಾಗಾಗಿ ಸಮಸ್ಯೆ ಉಂಟಾಗಿದೆ. ಮುಂದೆ ಈ ಸಮಸ್ಯೆ ಬಗೆಹರಿಸಿ ನೌಕರರಿಗೆ ತೊಂದರೆಯಾಗದ ನಿಟ್ಟಿನಲ್ಲಿ ವೇತನ ಆಗುವ ರೀತಿ ಕ್ರಮವಹಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ನಾಗರಾಜು, ಶಿವಕುಮಾರ್, ಶ್ರೀಧರ್, ನಾಗೇಂದ್ರ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net