ಜಿಲ್ಲಾ ಮಟ್ಟದ ಅಂತರ ಸಿಬಿಎಸ್‌ಇ ಶಾಲೆಗಳ ಮುಕ್ತ ಚದುರಂಗ ಪಂದ್ಯಾವಳಿ

ಕೊಳ್ಳೇಗಾಲದ ವಾಸವಿ ಮಹಲ್‌ನಲ್ಲಿ ಶ್ರೀ ವಾಸವಿ ವಿದ್ಯಾಕೇಂದ್ರ ಸಿಬಿಎಸ್‌ಇ ಶಾಲೆಯಿಂದ ಜಿಲ್ಲಾ ಮಟ್ಟದ ಅಂತರ ಸಿಬಿಎಸ್‌ಇ ಶಾಲೆಗಳ 16 ವರ್ಷದೊಳಗಿನ ಮುಕ್ತ ಚದುರಂಗ ಪಂದ್ಯಾವಳಿ ಆಯೋಜಿಸಲಾಗಿತ್ತು.
ಕೊಳ್ಳೇಗಾಲದ ವಾಸವಿ ಮಹಲ್‌ನಲ್ಲಿ ಶ್ರೀ ವಾಸವಿ ವಿದ್ಯಾಕೇಂದ್ರ ಸಿಬಿಎಸ್‌ಇ ಶಾಲೆಯಿಂದ ಜಿಲ್ಲಾ ಮಟ್ಟದ ಅಂತರ ಸಿಬಿಎಸ್‌ಇ ಶಾಲೆಗಳ 16 ವರ್ಷದೊಳಗಿನ ಮುಕ್ತ ಚದುರಂಗ ಪಂದ್ಯಾವಳಿ ಆಯೋಜಿಸಲಾಗಿತ್ತು.
Published on
ಕೊಳ್ಳೇಗಾಲ: ಪಟ್ಟಣದ ವಾಸವಿ ಮಹಲ್‌ನಲ್ಲಿ ಮಂಗಳವಾರ ಶ್ರೀವಾಸವಿ ವಿದ್ಯಾಕೇಂದ್ರ ಸಿಬಿಎಸ್‌ಇ ಶಾಲೆ ವತಿಯಿಂದ ಜಿಲ್ಲಾ ಮಟ್ಟದ ಅಂತರ ಸಿಬಿಎಸ್‌ಇ ಶಾಲೆಗಳ 16 ವರ್ಷದೊಳಗಿನ ಮುಕ್ತ ಚದುರಂಗ ಪಂದ್ಯಾವಳಿ ಆಯೋಜಿಸಲಾಗಿತ್ತು.
ಪಂದ್ಯಾವಳಿಯಲ್ಲಿ 9 ಸಿಬಿಎಸ್‌ಇ ಶಾಲೆಗಳಿಂದ 62 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೊಳ್ಳೇಗಾಲ ಪಟ್ಟಣದ ಶ್ರೀ ವಾಸವಿ ವಿದ್ಯಾ ಕೇಂದ್ರ ವಿದ್ಯಾರ್ಥಿನಿ ಚಿಂತನಾ ಅರಸ್ ಪ್ರಥಮ ಬಹುಮಾನ ಪಡೆದರು. ಚಾಮರಾಜನಗರ ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಲಕ್ಷ್ ನಾಗನಾಥ್ ದ್ವೀತಿಯ ಬಹುಮಾನ, ಚಾಮರಾಜನಗರ ಸೇವಾ ಭಾರತಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಶ್ರೇಯಸ್ ತೃತೀಯ ಬಹುಮಾನ ಪಡೆದರು. ಸೇವಾ ಭಾರತಿ ಪಬ್ಲಿಕ್ ಸ್ಕೂಲ್‌ನ ಬಿ.ಶಿವಾಂಕ್, ಎನ್.ತನುಷ್, ಬಡೆಯರಪಾಳ್ಯ ಸಂಭೋತ ಟಿಬೆಟನ್ ಶಾಲೆ ಯ ಟೆನ್ಜಿನ್ ಲೆಕ್ಡೆನ್, ಚಾಮರಾಜನಗರ ಸೇವಾ ಭಾರತಿ ಪಬ್ಲಿಕ್ ಸ್ಕೂಲ್‌ನ ಪೃಥ್ವಿರಾಜ್, ಚಾಮರಾಜನಗರ ಜೆಎಸ್‌ಎಸ್ ಪಬ್ಲಿಕ್ ಶಾಲೆ ಜಿ.ಭಾಸ್ಕರ್, ಜೆಎಸ್‌ಎಸ್ ಪಬ್ಲಿಕ್ ಶಾಲೆಯ ಎ.ಪಿ.ಶ್ರೇಯಸ್, ಚಾಮರಾಜನಗರ ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್ ವೈ.ಮೋಹಿತ್ ಬಹುಮಾನ ಪಡೆದರು.
ಶ್ರೀ ವಾಸವಿ ಸಿಬಿಎಸ್‌ಇ ಶಾಲೆ ನಿರ್ದೇಶಕ ಡಾ.ಆಶಿಕ್ ವಿ.ಓಲೈಟಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವಾಸವಿ ಸಿಬಿಎಸ್‌ಇ ಶಾಲೆಯ ಸಂಯೋಜಕ ಮಧುರ ರಾಜೇಶ್, ಪ್ರಾಂಶುಪಾಲ ಡಾ.ಎಸ್.ದಯಾಪ್ರಸಾದ್, ಆರ್ಬಿಟರ್ಸ್ ಕಿಶೋರ್ ಕುಮಾರ್, ಭರತ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net