ಎಸ್‌ಐಆರ್ ಯಶಸ್ಸಿಗೆ ಸಹಕಾರ ಅಗತ್ಯ

ಹನೂರಿನಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಆಯೋಜಿಸಿದ್ದ ಸಭೆಯಲ್ಲಿ ತಹಸೀಲ್ದಾರ್ ಕೆ.ಎನ್ ಚೈತ್ರಾ ಮಾತನಾಡಿದರು. ಸುರೇಖಾ, ವೃಷಭೇಂದ್ರಸ್ವಾಮಿ, ಸೋಮಣ್ಣ, ಮೀನಾ, ಜಗದೀಶ್ ಇತರರಿದ್ದರು.
ಹನೂರಿನಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಆಯೋಜಿಸಿದ್ದ ಸಭೆಯಲ್ಲಿ ತಹಸೀಲ್ದಾರ್ ಕೆ.ಎನ್ ಚೈತ್ರಾ ಮಾತನಾಡಿದರು. ಸುರೇಖಾ, ವೃಷಭೇಂದ್ರಸ್ವಾಮಿ, ಸೋಮಣ್ಣ, ಮೀನಾ, ಜಗದೀಶ್ ಇತರರಿದ್ದರು.
Published on
ಹನೂರು: ದೋಷರಹಿತ ಮತದಾರರ ಪಟ್ಟಿ ತಯಾರಿಸಲು ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣಾ (ಎಸ್‌ಐಆರ್) ಕಾರ್ಯದ ಯಶಸ್ಸಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ತಹಸೀಲ್ದಾರ್ ಕೆ.ಎನ್ ಚೈತ್ರಾ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಆಯೋಜಿಸಿದ್ದ ತರಬೇತಿಯಲ್ಲಿ ಮಾತನಾಡಿದರು.
ಯಶಸ್ವಿ ಚುನಾವಣೆಯು ದೋಷ ರಹಿತ ಹಾಗೂ ಪಾರದರ್ಶಕತೆಯ ಮತದಾರರ ಪಟ್ಟಿಯ ಮೇಲೆ ನಿಂತಿದೆ.
ಆದ್ದರಿಂದ ಮತದಾರರ ಪಟ್ಟಿ ದೋಷರಹಿತವಾಗಿರಬೇಕು. ಹಾಗಾಗಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕೈಗೊಳ್ಳುವ ಸಲುವಾಗಿ 2002ರ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ಒಳಗೊಂಡಂತೆ ಈಗ ಮ್ಯಾಪಿಂಗ್ ಮಾಡಲಾಗುತ್ತಿದ್ದು, ಈಗಾಗಲೇ ತಾಲೂಕಿನಲ್ಲಿ ಶೇ.97 ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಕಾರ್ಯವನ್ನು ಪೂರ್ಣಗೊಳಿಸಬೇಕಿದೆ. ನೀಡಲಾಗುವ ಗಣತಿ ನಮೂನೆಯನ್ನು ಮತದಾರರಿಗೆ ವಿತರಿಸಿ, ಭರ್ತಿಯಾದ ಫಾರ್ಮ್ ಸ್ವೀಕರಿಸಬೇಕು. ಈ ಕಾರ್ಯಕ್ಕಾಗಿ ಬಿಎಲ್‌ಒಗಳು ಜೂ. 30ರಿಂದ ಜು. 29ರವರೆಗೆ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಮತದಾರರು ಸಂಪೂರ್ಣ ವಿವರ ನೀಡಬೇಕಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಾಗಿದ್ದು, ಮಾಹಿತಿ ತಿಳಿಸಬೇಕಿದೆ. ಇದರಿಂದ ದೋಷರಹಿತ ಮತದಾರರ ಪಟ್ಟಿ ತಯಾರಿಕೆಗೆ ಸಹಕಾರಿಯಾಗಲಿದೆ. ಆ. 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಆಕ್ಷೇಪಣೆಗೆ ಅವಕಾಶವಿದೆ. ಆ.7 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ದೋಷ ರಹಿತ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಕೆಲಕಾಲ ಚರ್ಚಿಸಲಾಯಿತು. ಉಪ ತಹಸೀಲ್ದಾರ್ ಸುರೇಖಾ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ವೇಷಭೇಂದ್ರಸ್ವಾಮಿ, ಸೋಮಣ್ಣ, ಜಗದೀಶ್, ಮುರುಗೇಶ್, ಲೋಕೇಶ್ ಜತ್ತಿ, ಮಲ್ಲೇಶ್, ಅಮೋಘ್, ಮೀನಾ ಹಾಗೂ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net