ನಗರಸಭೆ ಕಂದಾಯ ನಿರೀಕ್ಷಕ ಶಕೀಲ್ ಅಹಮದ್, ಕಂದಾಯ ಅಧಿಕಾರಿ ಹೇಮಕುಮಾರ್ ಬಂಧಿತರು. ನಗರದ ಉಪ್ಪಾರ ಬೀದಿಯ ನಿವಾಸಿ ಮೀಸೆ ನಾಗರಾಜು ನೀಡಿದ್ದ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆಗಿಳಿದರು. ನಿವೇಶನದ ಇ-ಖಾತೆ ಮಾಡಿಕೊಡಲು 25 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಂತೆಯೇ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಇನ್‌ಪೆಕ್ಟರ್ ಲೋಹಿತ್ ಮತ್ತು ಸಿಬ್ಬಂದಿ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದೆ.