318 ಕಾಮಗಾರಿಗಳಿಗೆ ಕ್ರಿಯಾ ಯೋಜನೆ

ಯಳಂದೂರು ತಾಲೂಕಿನ ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಏರ್ಪಡಿಸಿದ್ದ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಪಿಡಿಒ ಸಿ.ಎನ್.ಕಾವ್ಯಾ ಮಾತನಾಡಿದರು.
ಯಳಂದೂರು ತಾಲೂಕಿನ ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಏರ್ಪಡಿಸಿದ್ದ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಪಿಡಿಒ ಸಿ.ಎನ್.ಕಾವ್ಯಾ ಮಾತನಾಡಿದರು.
Published on
ಯಳಂದೂರು: ತಾಲೂಕಿನ ದುಗ್ಗಹಟ್ಟಿ ಗ್ರಾಮದಲ್ಲಿ ಮಂಗಳವಾರ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಹಮ್ಮಿಕೊಳ್ಳಲಾಗಿತ್ತು.
ಅಭಿವೃದ್ಧಿ ಅಧಿಕಾರಿ ಸಿ.ಎನ್.ಕಾವ್ಯಾ ಮಾತನಾಡಿ, ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ದುಗ್ಗಹಟ್ಟಿ, ಮೆಳ್ಳಹಳ್ಳಿ, ಎ.ಕಂದಹಳ್ಳಿ, ಡಿ.ಕಂದಹಳ್ಳಿ, ವೈ.ಕೆ.ಮೋಳೆ ಗ್ರಾಮಗಳು ಸೇರುತ್ತವೆ. ಪ್ರಸಕ್ತ ಸಾಲಿನಲ್ಲಿ ಪಂಚಾಯಿತಿ ವ್ಯಾಪ್ತಿಯ ಚರಂಡಿ ಹಾಗೂ ನೀರಿನ ಸಮಸ್ಯೆ ಬಗೆಹರಿಸಲು ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಆಗ್ರಹಿಸಿದ್ದಾರೆ. ಪಂಚಾಯಿತಿಗೆ 14 ನೇ ಹಣಕಾಸು ಯೋಜನೆಯಡಿ ಇನ್ನೂ ಹಣ ಬಿಡುಗಡೆಯಾಗದ ಕಾರಣ ಈ ಕೆಲಸ ವಿಳಂಬವಾಗಿದೆ. ಶೀಘ್ರ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ವಿಬಿ ರಾಮ್ ಜಿ ಯೋಜನೆಯಡಿ ಗ್ರಾಮೀಣರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಈ ಬಾರಿ 318 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಪಂಚಾಯಿತಿಯನ್ನು ಎ, ಬಿ ಮತ್ತು ಸಿ ಮಾದರಿಯಲ್ಲಿ ಮೂರು ವಿಭಾಗಗಳಾಗಿ ವಿಗಂಡಣೆ ಮಾಡಿಕೊಳ್ಳಲಾಗಿದ್ದು ಕಾಮಗಾರಿ ನೀಡಲಾಗುವುದು. ಕಳೆದ ಬಾರಿ ಒಟ್ಟು 62 ಕಾಮಗಾರಿಗಳು ನಡೆದಿವೆ. ಇದರಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 55 ಕಾಮಗಾರಿಗಳು ನಡೆದಿವೆ. ಅರಣ್ಯ ಇಲಾಖೆಯ 6, ತೋಟಗಾರಿಕಾ ಇಲಾಖೆಯ 1 ಕಾಮಗಾರಿ ಸೇರಿದ್ದು ಒಟ್ಟು 31,88,801 ರೂ.ಹಣ ವಿನಿಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ನೋಡಲ್ ಅಧಿಕಾರಿ ಶಿವಣ್ಣ, ಪಶು ವೈದ್ಯಾಧಿಕಾರಿ ಡಾ.ಶಿವರಾಜು, ನರೇಗಾ ಜೆಇ ರಾಕೇಶ್, ಸಾಮಾಜಿಕ ಅರಣ್ಯ ಇಲಾಖೆಯ ನಾಗರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net