19 ಗ್ರಾಮ ಪಂಚಾಯಿತಿಗಳು ಕ್ಷಯಮುಕ್ತ

ಗುಂಡ್ಲುಪೇಟೆ ತಾಲೂಕು ಕೋಟೆಕೆರೆ ಗ್ರಾಮದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ.ಅಲೀಂಪಾಷಾ, ಸೋನಾ, ರಾಘವೇಂದ್ರ ಇದ್ದರು.
ಗುಂಡ್ಲುಪೇಟೆ ತಾಲೂಕು ಕೋಟೆಕೆರೆ ಗ್ರಾಮದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ.ಅಲೀಂಪಾಷಾ, ಸೋನಾ, ರಾಘವೇಂದ್ರ ಇದ್ದರು.
Published on
ಗುಂಡ್ಲುಪೇಟೆ: ಕ್ಷಯ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ತಾಲೂಕಿನ 19 ಗ್ರಾಮ ಪಂಚಾಯಿತಿಗಳನ್ನು ಕ್ಷಯಮುಕ್ತಗೊಳಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂಪಾಷಾ ಹೇಳಿದರು.
ತಾಲೂಕಿನ ಕೋಟೆಕೆರೆ ಗ್ರಾಮದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ 100 ದಿನಗಳ ಟಿಬಿ ಅಭಿಯಾನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾತನಾಡಿದರು. ಜನರಲ್ಲಿ ಕ್ಷಯರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಅಭಿಯಾನ ನಡೆಸಲಾಗುತ್ತಿದೆ. 2 ವಾರಗಳಿಗಿಂತ ಹೆಚ್ಚು ಕೆಮ್ಮು, ಜ್ವರ, ರಾತ್ರಿ ಹೆಚ್ಚು ಬೆವರುವುದು, ತೂಕ ಕಡಿಮೆಯಾಗುವುದು, ಹಸಿವು ಕಡಿಮೆಯಾಗುವುದು, ಎದೆನೋವು, ಕೆಲವೊಮ್ಮೆ ಕಫದಲ್ಲಿ ರಕ್ತ ಬರುವುದು ಕಂಡುಬಂದಲ್ಲಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಆರಂಭದಲ್ಲಿಯೇ ಪತ್ತೆಹಚ್ಚಬಹುದು. ಪೋರ್ಟಬಲ್ ಡಿಜಿಟಲ್ ಎಕ್ಸ್-ರೇ ಯಂತ್ರ ಬಳಸಿ ಎದೆ ಎಕ್ಸ್-ರೇ, ಕ್ಷಯರೋಗ ತಪಾಸಣೆಯ ಜತೆಗೆ ಮಧುಮೇಹ, ರಕ್ತದೊತ್ತಡ ಹಾಗೂ ರಕ್ತಹೀನತೆ ಕಾಯಿಲೆಗಳ ತಪಾಸಣೆ ಕೈಗೊಳ್ಳಲಾಗುತ್ತಿದೆ. ಒಟ್ಟು 152 ಜನರನ್ನು ತಪಾಸಣೆ ಮಾಡಲಾಗಿದ್ದು, ಅವರಲ್ಲಿ 57 ಜನರಿಗೆ ಪೋರ್ಟಬಲ್ ಡಿಜಿಟಲ್ ಎಕ್ಸ್-ರೇ ಮೂಲಕ ಎದೆ ಎಕ್ಸ್-ರೇ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿದರು.
ಸಿಎಚ್‌ಒ ಸೋನಾ, ರಾಘವೇಂದ್ರ, ಸೌಭಾಗ್ಯಾ, ಕಲಾವತಿ, ದೀಪಶ್ರೀ ನವೀನ್ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net