ಪೊಲೀಸರ ವಿರುದ್ಧವೇ ದೂರು ಕೊಟ್ಟ ಸಿಡಿ ಯುವತಿ ಪರ ವಕೀಲ! ಅಷ್ಟಕ್ಕೂ ಪೊಲೀಸರ ತಪ್ಪೇನು?

cd jagadeesh
Published on

ಬೆಂಗಳೂರು: ಪೊಲೀಸರ ವಿರುದ್ಧವೇ ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ 'ಸಂತ್ರಸ್ತ' ಯುವತಿ ಪರ ವಕೀಲ ಜಗದೀಶ್​ ದೂರು ನೀಡಿದ್ದಾರೆ. ಕೋರ್ಟ್ ಆವರಣದಲ್ಲಿ ಚಿತ್ರೀಕರಣ ನಿಷೇಧವಿದ್ದರೂ ಮಾಡಲಾಗಿದೆ. ಇದೆಲ್ಲವೂ ಹಿರಿಯ ಪೊಲೀಸ್ ಅಧಿಕಾರಿಗಳ ಆದೇಶದಂತೆ ನಡೆದಿರುವಂತಿದೆ ಎಂದು ಜಗದೀಶ್​ ಆರೋಪಿಸಿದ್ದಾರೆ. ಈ ಕುರಿತು ನಗರ ಪೊಲೀಸ್ ಆಯುಕ್ತರಿಗೆ ಇಂದು ಜಗದೀಶ್​ ದೂರು ನೀಡಿದ್ದಾರೆ.

ಸೋಮವಾರ ಕೋರ್ಟ್​ ಆವರಣಕ್ಕೆ ಬಂದ ಸಿಡಿ ಯುವತಿಯ ದೃಶ್ಯವನ್ನ ಕಿರಿಯ ಪೊಲೀಸ್ ಅಧಿಕಾರಿಗಳೇ ಮೊಬೈಲ್​ನಲ್ಲಿ ಚಿತ್ರಿಸಿ ವೈರಲ್​ ಮಾಡಿದ್ದಾರೆ. ಕೋರ್ಟ್ ಆವರಣದಲ್ಲಿ ಮೊಬೈಲ್‌ ಮುಖಾಂತರ ವಿಡಿಯೋ ಚಿತ್ರೀಕರಿಸಲಾಗಿದೆ. ಇದನ್ನೂ ಓದಿರಿ ರಜನಿಕಾಂತ್​ಗೆ ಒಲಿದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ನಿನ್ನೆ(ಬುಧವಾರ) ಫೇಸ್​ಬುಕ್​ ಲೈವ್​ನಲ್ಲಿ ಮಾತನಾಡಿದ್ದ ವಕೀಲ ಜಗದೀಶ್​, ಸಿಡಿ ಪೊಲೀಸರು ಆರೋಪಿ(ರಮೇಶ್​ ಜಾರಕಿಹೊಳಿ)ಗೆ ಸಹಕರಿಸುತ್ತಿರೋ ಬಗ್ಗೆ ದಾಖಲೆ‌ಯಿದೆ. ಇದಕ್ಕೆ ಎಸ್ಐಟಿ ಉತ್ತರ ಕೊಡುತ್ತಾ? ಎಸ್ಐಟಿ ಕುರಿತಾದ ಸಾಕ್ಷ್ಯಗಳು ನಮ್ಮ ಬಳಿ ಇದೆ. 164 ಅಡಿ ಹೇಳಿಕೆ ಪಡೆಯುವ ಸಂದರ್ಭದಲ್ಲಿ 150ಕ್ಕೂ ಹೆಚ್ಚು ವಕೀಲರು ಹಾಜರಿದ್ದರು. ನಾವು ಯಾರಿಗೂ ಬನ್ನಿ ಎಂದಿರಲಿಲ್ಲ. ಯುವತಿ ಪರವಾಗಿ ಅವರು ವಿಚಾರಣೆ ವೇಳೆ ಹಾಜರಿದ್ದಾರೆ. ವಿಚಾರಣೆ ಮುಗಿಸಿ ಹೊರ ಬಂದಾಗ ಯುವತಿಯ ವಿಡಿಯೋವನ್ನು ಪೊಲೀಸರೇ ಮಾಡಿ ಮಾಧ್ಯಮಕ್ಕೆ ಹಂಚಿದ್ದಾರೆ ಎಂದು ವಕೀಲ‌ ಜಗದೀಶ್​ ಅಸಮಾಧಾನ ಹೊರಹಾಕಿದ್ದರು.

ಕೆಪಿಸಿಸಿಯ ಸೂರ್ಯ ಮುಕುಂದರಾಜ್ ಬಂದ ಪೊಟೋವನ್ನು ಪೊಲೀಸರೇ ವೈರಲ್ ಮಾಡಿದ್ದಾರೆ. ಸೂರ್ಯ ಮುಕುಂದರಾಜ್ ವಕೀಲರಾಗಿ ಹಾಜರಿದ್ದರು. ಫೋಟೋ ವೈರಲ್ ಮಾಡಿದ ಎಸ್​ಐಟಿ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತೇನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net