ಸೋಮೇಶ್ವರ ಉಚ್ಚಿಲ ಮರಳು ಅಡ್ಡೆಗೆ ಸಿಸಿಬಿ ದಾಳಿ

sand raid
ಸಿಸಿಬಿ ಪೊಲೀಸರು ವಶಪಡಿಸಿಕೊಂಡಿರುವ ಮರಳು ಹಾಗೂ ನಾಡದೋಣಿ.
Published on

ಉಳ್ಳಾಲ: ಸೋಮೇಶ್ವರ ಉಚ್ಚಿಲ ನಾಗತೋಟದ ಖಾಸಗಿ ಜಮೀನಿನಲ್ಲಿ ಸಂಗ್ರಹಿಸಿಡಲಾಗಿದ್ದ ಮರಳು ಅಡ್ಡೆಗೆ ಸಿಸಿಬಿ ಪೊಲೀಸರು, ಭೂ ಮತ್ತು ಗಣಿ ವಿಜ್ಞಾನ ಅಧಿಕಾರಿಗಳು ಜಂಟಿಯಾಗಿ ಬುಧವಾರ ಬೆಳಗ್ಗೆ ದಾಳಿ ನಡೆಸಿ ಭಾರೀ ಪ್ರಮಾಣದ ಮರಳು ಮತ್ತು ನಾಲ್ಕು ನಾಡದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.

ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಸಮುದ್ರ ತೀರದಿಂದ ಪ್ರತಿದಿನ ಅಕ್ರಮವಾಗಿ ಮರಳು ತೆಗೆದು ನಾಡ ದೋಣಿಗಳ ಮೂಲಕ ಸಾಗಿಸಿ ನಾಗತೋಟದಲ್ಲಿರುವ ಮಹಮ್ಮದ್ ಆಲಿ ಎಂಬುವರ ಖಾಸಗಿ ಜಮೀನಿನಲ್ಲಿ ಸಂಗ್ರಹಿಸಿ ತಡರಾತ್ರಿ ಬಳಿಕ ಕೇರಳಕ್ಕೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಗೆ ಮಂಗಳವಾರ ಕರೆ ಮಾಡಿ ನೀಡಿದ್ದ ದೂರಿನ ಮೇರೆಗೆ ದಾಳಿ ನಡೆಸಲಾಗಿತ್ತು. ಆರೋಪಿಗಳಾದ ಜಯರಾಮ್ ಶೆಟ್ಟಿ, ಇಬ್ರಾಹಿಂ, ವಿನೋದ್ ಉಚ್ಚಿಲ್, ಚಂದ್ರ ಸೋಮೇಶ್ವರ ಮತ್ತು ಸುನಿಲ್ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಮರಳು ಮತ್ತು ನಾಡ ದೋಣಿಗಳನ್ನು ಭೂ ಮತ್ತು ಗಣಿ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net