7 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ; ನಾಲ್ವರು ಮಹಿಳಾ ಡ್ರಗ್ ಪೆಡ್ಲರ್​ಗಳ ಬಂಧನ

Drug Pedlers
Published on

ಬೆಂಗಳೂರು: ಮಾದಕ ವಸ್ತು ಮಾರಟ ಮಾಡುವವರ ವಿರುದ್ಧ ಸಿಸಿಬಿ ಪೊಲೀಸರ ದಾಳಿ ಮುಂದುವರಿದಿದೆ. ಇದೀಗ ಪೊಲೀಸರು ಓರ್ವ ವಿದೇಶಿ ಪ್ರಜೆ ಸೇರಿ, ನಾಲ್ವರು ಮಹಿಳಾ ಡ್ರಗ್ ಪೆಡ್ಲರ್​ಗಳನ್ನು ಬಂಧಿಸಿದ್ದಾರೆ.

ಆಂಧ್ರದ ಸಿಂತಪಲ್ಲಿ ಅರಣ್ಯ ಪ್ರದೇಶದಿಂದ ರೈಲಿನ ಮೂಲಕ ಬೆಂಗಳೂರಿಗೆ ಡ್ರಗ್​ ಸಾಗಾಟ ಮಾಡಲಾಗುತ್ತಿತ್ತು. ನಾಲ್ವರು ಮಹಿಳೆಯರು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಬೆಂಗಳೂರಿನಲ್ಲಿರುವ ಡ್ರಗ್ ಪೆಡ್ಲರ್​​ಗಳಿಗೆ ಸಪ್ಲೈ ಮಾಡುತ್ತಿದ್ದರು.

ಈ ಹಿಂದೆ ವಿವೇಕ ನಗರ ಠಾಣೆಯಲ್ಲಿ ಓರ್ವ ಡಿಜೆ ಬಂಧನವಾಗಿತ್ತು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆಂಧ್ರದಿಂದ ಮಹಿಳೆಯರ ಮೂಲಕ ಬೆಂಗಳೂರಿಗೆ ಡ್ರಗ್ಸ್ ರವಾನೆಯಾಗುತ್ತಿರುವ ಮಾಹಿತಿ ಲಭಿಸಿದೆ. ಈ ಮಾಹಿತಿಯನ್ನು ಬೆನ್ನತ್ತಿದ ಸಿಸಿಬಿ ಪೊಲೀಸರಿಗೆ 7 ಕೋಟಿ 80 ಲಕ್ಷ ಬೆಲೆ ಬಾಳುವ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿದೆ.

ಮಹಿಳೆಯರು ಬೆಂಗಳೂರು, ಚೆನ್ನೈ, ಹೈದರಾಬಾದ್. ಕೊಚ್ಚಿನ್​ನಲ್ಲಿರುವ ಪೆಡ್ಲರ್​ಗಳಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದರು. ಇವರೆಲ್ಲರೂ ಮಹಿಳೆಯರು ಆಗಿದ್ದರಿಂದ ಇದುವರೆಗೆ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಡ್ರಗ್ ಸಪ್ಲೈ ಮಾಡುತ್ತಿದ್ದರು. ಇವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 8 ಕೆ.ಜಿ ಆಶಿಷ್ ಆಯಿಲ್, 10 ಕೆ.ಜಿ ಗಾಂಜಾ, 1 ಕೆ.ಜಿ MDMA ಕ್ರಿಸ್ಟಲ್ ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net