

ಕಾಸರಗೋಡು: ಸೂಕ್ತ ದಾಖಲೆಪತ್ರಗಳಿಲ್ಲದೆ ಸಾಗಿಸುತ್ತಿದ್ದ 35.49ಲಕ್ಷ ರೂ. ನಗದನ್ನು ರೈಲ್ವೆ ಪೊಲೀಸ್ ವಿಭಾಗದ ವಿಶೇಷ ತಂಡ ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪಾವೂರು ನಿವಾಸಿ ಉಮ್ಮರ್ ಫಾರೂಕ್ ಎಂಬಾತನನ್ನು ರೈಲ್ವೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಂಗಳೂರು-ಕೊಯಂಬತ್ತೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದ ಉಮ್ಮರ್ ಫಾರೂಕ್ ವಶದಲ್ಲಿದ್ದ 39, 49, 600ರೂ. ನಗದನ್ನು ಕಣ್ಣೂರು ಸನಿಹದಿಂದ ವಶಪಡಿಸಿಕೊಳ್ಳಲಾಗಿದೆ. ಕಣ್ಣೂರು ರೈಲ್ವೆ ನಿಲ್ದಾಣ ಇನ್ಸ್‌ಪೆಕ್ಟರ್ ಪಿ.ವಿಜೇಶ್ ನೇತೃತ್ವದ ಪೊಲೀಸರ ತಂಡ ಕಣ್ಣೂರಿನಿಂದ ಕಾಸರಗೋಡು ವರೆಗೆ ನಡೆಸಲಾದ ವಿಶೇಷ ಕಾರ್ಯಾಚರಣೆಯಲ್ಲಿ ಅನಧಿಕೃತ ಸಾಗಾಟದ ನಗದು ಪತ್ತೆಹಚ್ಚಲಾಗಿದೆ.