ಕಡಬ: ಉನ್ನತ ಶಿಕ್ಷಣಕ್ಕೆ ತಯಾರಾಗುವ ವಿದ್ಯಾರ್ಥಿಗಳು ನಕಾರಾತ್ಮಕ ಭಾವನೆ ಇಟ್ಟುಕೊಳ್ಳಬಾರದು. ನಿರಂತರ ಅಧ್ಯಯನ, ಪ್ರಯತ್ನದಿಂದ ಉನ್ನತ ಸಾಧನೆ ಸಾಧ್ಯ ಎಂದು ತರಬೇತುದಾರ ರಾಜ್‌ಕಿರಣ್ ಹೇಳಿದರು.
ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಗಳಿಗಾಗಿ ಆಯೋಜಿಸಿದ ಸಿಇಟಿ, ನೀಟ್ ತರಗತಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ಹದಿಹರೆಯದಲ್ಲಿ ವಿವಿಧ ವಿಷಯಗಳತ್ತ ಆಕರ್ಷಿತರಾಗುವುದು ಸಹಜ. ಆದರೆ ಅವುಗಳಿಗೆ ಮರುಳಾಗದೆ ಸಾಧನೆಯತ್ತ ಚಿತ್ತವಿರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಚಂದ್ರಶೇಖರ ಕೆ.ಶ್ರೀ ರಾಮಕುಂಜೇಶ್ವರ ಕಾಲೇಜಿನಲ್ಲಿ ಆಯೋಜಿಸಿದ್ದ ಸಿಇಟಿ, ನೀಟ್ ತರಗತಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಚಂದ್ರಶೇಖರ ಕೆದ್ದೋಟೆ ಮಾತನಾಡಿದರು. ತರಬೇತುದಾರ ರಾಜ್‌ಕಿರಣ್, ಬಿ.ಸುಬ್ರಹ್ಮಣ್ಯ ಕಾರಂತ್ ಇದ್ದರು.ಮಾತನಾಡಿ, ಕಠಿಣ ಪರಿಶ್ರಮ ಎಲ್ಲೂ ಗೋಚರಿಸುವುದಿಲ್ಲ. ಆದರೆ ಪ್ರತಿಫಲ ಕಣ್ಣಮುಂದೆಯೇ ಕಾಣುತ್ತದೆ. ಗೆಲುವಿಗೆ ಪ್ರಯತ್ನಿಸುವಾಗ ಸೋಲು ಸಹಜವಾಗಿದ್ದು, ಪ್ರಯತ್ನ ಕೈ ಬಿಡಬಾರದು ಎಂದರು.
ಸಾಧಕ ವಿದ್ಯಾರ್ಥಿ ಜೀವನ್ ಅನುಭವ ಹಂಚಿಕೊಂಡರು. ವಿಜ್ಞಾನ ವಿಭಾಗದ ಮುಖ್ಯಸ್ಥ ಬಿ.ಸುಬ್ರಹ್ಮಣ್ಯ ಕಾರಂತ್ ಉಪಸ್ಥಿತರಿದ್ದರು. ಸಂಯೋಜಕಿ ಸ್ವಾತಿ ಪ್ರಾಸ್ತಾವಿಸಿದರು. ಶ್ರೀರಕ್ಷಾ ಸ್ವಾಗತಿಸಿದರು. ಭವ್ಯ ವಂದಿಸಿದರು. ವಿದ್ಯಾರ್ಥಿ ಆಂಟೊನಿ ಕಾರ್ಯಕ್ರಮ ನಿರೂಪಿಸಿದರು.