ರಸ್ತೆಬದಿಯ ಕೆರೆಗೆ ಹಾರಿದ ಕಾರು; ಚಾಲಕ ಪವಾಡಸದೃಶವಾಗಿ ಅಪಾಯದಿಂದ ಪಾರು!

Feature
Published on

ಹಾಸನ: ಜಿಲ್ಲೆಯ ಅರಕಲಗೂಡಿನ ಜನರಿಗೆ ಇಂದು ಒಂದು ರೀತಿಯಲ್ಲಿ ಅಚ್ಚರಿ ಕಾಣಿಸಿಕೊಂಡಿತ್ತು. ಲಾಕ್​ಡೌನ್​ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನಗಳು ಅತಿವಿರಳವಾಗಿದ್ದರೂ ರಸ್ತೆ ಬದಿಯ ಕೆರೆಯಲ್ಲಿ ಕಾರೊಂದು ಇರುವುದು ಕಂಡುಬಂದಿದೆ.

ಹೌದು.. ಹಾಸನ ಜಿಲ್ಲೆ ಅರಕಲಗೂಡಿನ ಅರಸೀಕಟ್ಟೆ ಕೆರೆಗೆ ಕಾರು ಧುಮುಕಿದೆ. ಅರ್ಥಾತ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಬದಿಗೆ ಸರಿದ ಕಾರು ಸೀದಾ ಕೆರೆ ಮಧ್ಯಕ್ಕೇ ಹೋಗಿ ಬಿದ್ದಿದೆ. ಮುತ್ತುಗದ ಹೊಸೂರಿನ ಹರೀಶ್ ಎಂಬವರು ಕಾರಿನಲ್ಲಿದ್ದು, ಅವರು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಅವರು ಹೊರಕ್ಕೆ ಹಾರಿ ಈಜಿಕೊಂಡು ದಡ ಸೇರಿ ಪಾರಾಗಿದ್ದಾರೆ. ಕಾರು ನಿಧಾನಕ್ಕೆ ಮುಳುಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net