ಮಾವಿನಕಟ್ಟೆ ಮಸೀದಿ ಸನಿಹ ಕಾರು ಪಲ್ಟಿ: ಯುವಕ ಮೃತ್ಯು

accident-15
Published on

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಮಾವಿನಕಟ್ಟೆ ಮಸೀದಿ ಸನಿಹ ಕಾರು ಮಗುಚಿಬಿದ್ದ ಪರಿಣಾಮ ಯುವಕ ಮೃತಪಟ್ಟಿದ್ದು, ಅವರ ಸಹೋದರ ಗಂಭೀರ ಗಾಯಗೊಂಡಿದ್ದಾರೆ. ಮಾವಿನಕಟ್ಟೆ ನಿವಾಸಿ ಕಲಂದರ್ ಸಮ್ಮಾಸ್(21)ಮೃತಪಟ್ಟವರು. ಅವರ ಸಹೋದರ ಮೊಯ್ದೀನ್ ಸರ್ವಾಸ್ ಗಂಭೀರ ಗಾಯಗೊಂಡಿದ್ದು, ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಿಂದ ಹೊರಕ್ಕೆ ಎಸೆಯಲ್ಪಟ್ಟು, ಗಂಭೀರ ಗಾಯ

ಸಹೋದರರಿಬ್ಬರು ಸಂಬಂಧಿಕರ ಮನೆಗೆ ತೆರಳಿ ವಾಪಸಾಗುವ ಮಧ್ಯೆ ಶುಕ್ರವಾರ ತಡರಾತ್ರಿ ಅಪಘಾತ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಕಲಂದರ್ ಸಮ್ಮಾಸ್ ಕಾರಿನಿಂದ ಹೊರಕ್ಕೆ ಎಸೆಯಲ್ಪಟ್ಟು, ಗಂಭೀರ ಗಾಯಗೊಂಡಿದ್ದರು. ತಕ್ಷಣ ಇಬ್ಬರನ್ನೂ ಚೆಂಗಳದ ಸಹಕಾರಿ ಅಸ್ಪತ್ರೆಗೆ ದಾಖಲಿಸಿದರೂ, ಕಲಂದರ್ ಸಮ್ಮಾಸ್ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಕಲಂದರ್ ಸಮ್ಮಾಸ್ ಬದಿಯಡ್ಕದ ಬೇಕರಿಯೊಂದರ ಉದ್ಯೋಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net