ಪ್ರತಿಭೆಗಳ ಅನಾವರಣಕ್ಕೆ ಶಿಬಿರಗಳು ಸಹಕಾರಿ

kota
Published on

ಕೋಟ: ಶಿಬಿರಗಳಲ್ಲಿ ಪ್ರತಿಭೆಗಳ ಅನಾವರಣಕ್ಕೆ ಅವಕಾಶಗಳು ಹೆಚ್ಚಿದ್ದು, ಮಕ್ಕಳು ಇನ್ನೊಬ್ಬರ ವಾತು ಕೇಳುವುದೇ ಜಾಣತನವಲ್ಲ. ಸ್ವತಂತ್ರವಾಗಿ ಯೋಚಿಸುವುದು ಜಾಣತನ ಎಂದು ಉದಯ್ ಗಾಂವ್ಕರ್ ಅಭಿಪ್ರಾಯಪಟ್ಟರು.

ಕೊಮೆ ತೆಕ್ಕಟ್ಟೆ ಯಶಸ್ವೀ ಕಲಾವೃಂದ, ಧಮನಿ ಟ್ರಸ್ಟ್ ತೆಕ್ಕಟ್ಟೆ, ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವದಲ್ಲಿ 23 ದಿನಗಳ ಕಾಲದ ರಜಾರಂಗು ‘ಚಂದಕ್ಕಿ ಬಾರೆ ಕಥೆ ಹೇಳೆ’ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಶಿಬಿರ ನಿರ್ದೇಶಕರಾದ ಶ್ರೀಷ ತೆಕ್ಕಟ್ಟೆ, ರಂಜಿತ್ ಶೆಟ್ಟಿ ಕುಕ್ಕುಡೆ, ಅಶೋಕ್ ಮೈಸೂರು ಹಾಗೂ ಕೃಷ್ಣ ಬಡಿಗೇರ ಅವರಿಗೆ ಗುರುವಂದನೆ ಸಲ್ಲಿಸಿ ಮಾತನಾಡಿದರು.

ಯಕ್ಷಗುರು ಲಂಬೋದರ ಹೆಗಡೆ, ಹೆರಿಯ ವಾಸ್ಟರ್, ಸಚಿನ್ ಅಂಕೋಲ, ಕೃಷಿಕ ಪಾರಂಪಳ್ಳಿ ರವೀಂದ್ರ ಐತಾಳ್, ರಂಗಕರ್ಮಿ ಸುಪ್ರಿತ್ ಪುರಾಣಿಕ್ ಮಾತನಾಡಿದರು. ಉದ್ಯಮಿ ಸುಬ್ರಾಯ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಗೋವಿಂದ ಉರಾಳ್, ಅನುಪಮಾ, ಅನಿತಾ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net