ಕರೊನಾ ಸೋಂಕು ಹರಡಲು ರಾಜಕೀಯ ವಿರೋಧಿಗಳೇ ಕಾರಣ: ಸಚಿವ ಸಿ.ಪಿ. ಯೋಗೇಶ್ವರ್​ ಗಂಭೀರ ಆರೋಪ

CP Yogeshwar vvani
Published on

ರಾಮನಗರ: ಮಹಾಮಾರಿ ಕರೊನಾ ವೈರಸ್​ ಸೋಂಕು ಹರಡಲು ರಾಜಕೀಯ ವಿರೋಧಿಗಳೇ ಕಾರಣ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್​ ಅವರು ಗಂಭೀರ ಆರೋಪ ಮಾಡಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು ಸೋಂಕಿನ ವಾತಾವರಣದ ರಾಜಕೀಯ ಲಾಭ ಪಡೆಯಲು ಹಲವು ಹೇಳಿಕೆಗಳನ್ನು ಕೊಟ್ಟರು. ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದರು. ಲಸಿಕೆಯಿಂದ ದುಷ್ಪರಿಣಾಮ ಆಗುತ್ತದೆ ತಗೋಬೇಡಿ ಎಂದರು. ಇದರಿಂದ ಭಯಗೊಂಡ ಜನ ಆಸ್ಪತ್ರೆ ಕಡೆ ಮುಖ‌ ಮಾಡಲೇ ಇಲ್ಲ ಎಂದು ಹೇಳಿದರು.

ಈಗ ಜನರಿಗೆ ಅರಿವಾಗಿದೆ. ಲಸಿಕೆಯಿಂದ ಸೋಂಕು ತಡೆಯಲು ಸಾಧ್ಯ ಎಂದು ಗೊತ್ತಾಗಿದೆ. ಹೀಗಾಗಿ ಲಸಿಕೆಗಾಗಿ ಜನ ಮುಗಿ ಬಿದ್ದಿದ್ದಾರೆ. ಇದರಿಂದ ಸರ್ಕಾರಕ್ಕೆ ವೈದ್ಯಕೀಯ ಸೌಲಭ್ಯ ಕೊಡುವ ಸವಾಲು ಎದುರಾಗಿದೆ ಎಂದರು.

ಇಂತಹ ಕಠಿಣ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಭ್ರಷ್ಟ ಎಂದು ಬಿಂಬಿಸುತ್ತಿದ್ದಾರೆ. ಜನರ ಜತೆ ನಿಲ್ಲಬೇಕಾದ ರಾಜಕಾರಣಿಗಳು ಈ ಸಮಯದಲ್ಲಿ ಕರುಣೆಯಿಂದ ವರ್ತಿಸಬೇಕು. ಕರೊನಾ ಪರಿಸ್ಥಿತಿಯನ್ನು ರಾಜಕೀಯವಾಗಿ ಬಳಸಿಕೊಂಡ ವಿರೋಧಿಗಳನ್ನು ಖಂಡಿಸುತ್ತೇನೆಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net