ಟ್ಯೂಶನ್​ಗೆ ಹೋದ ಬಾಲಕಿ ಮೇಲೆ ಶಿಕ್ಷಕಿಯ ಗಂಡನಿಂದ ರೇಪ್​: ಎರಡು ವರ್ಷದ ಬಳಿಕ ಆರೋಪಿ ಬಂಧನ

Girl
Published on

ಅಹಮದಾಬಾದ್​: ಹದಿನೈದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ಎರಡು ವರ್ಷಗಳ ಬಳಿಕ ಭಾನುವಾರ ದಾಖಲಾದ ದೂರಿನ ಆಧಾರದ ಮೇಲೆ ಸೋಮವಾರ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿಯ ಪತ್ನಿ ಶಿಕ್ಷಕಿಯಾಗಿದ್ದು, ಸಂತ್ರಸ್ತೆ ಆಕೆಯಿಂದ ಟ್ಯೂಶನ್​ ಪಡೆದುಕೊಳ್ಳುತ್ತಿದ್ದಳು. 2019ರಲ್ಲಿ ಒಮ್ಮೆ ಶಿಕ್ಷಕಿಯ ಮನೆಗೆ ಹೋದಾಗ ಶಿಕ್ಷಕಿ ಅಲ್ಲಿರಲಿಲ್ಲ. ಆಕೆ ಬರುವವರೆಗೂ ಮನೆಯಲ್ಲೇ ಉಳಿಯುವಂತೆ ಆರೋಪಿ ಹೇಳಿದ್ದಾನೆ.

ಈ ನಡುವೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಯಾರಿಗೂ ಹೇಳದಂತೆ ಆಕೆಯನ್ನು ಬೆದರಿಸಿದ್ದಾನೆ. ಆದರೆ, ಇತ್ತೀಚೆಗೆ ಬಾಲಕಿ ನಡೆದ ಘಟನೆಯನ್ನು ತನ್ನ ಪಾಲಕರ ಮುಂದೆ ಬಿಚ್ಚಿಟ್ಟಿದ್ದಾಳೆ. ಈ ಹಿನ್ನೆಲೆಯಲ್ಲಿ ಭಾನುವಾರ ದೂರು ಸಹ ದಾಖಲಿಸಿದ್ದಾರೆ. ಇದಾದ ಬೆನ್ನಲ್ಲೇ ಸೋಮವಾರ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯ ಸೆಕ್ಷನ್​ 376ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net