ನಟ ಸಲ್ಮಾನ್​ ಖಾನ್​ ಬಾಡಿಗಾರ್ಡ್​ ಶೇರಾ ಸಂಬಳ ಓರ್ವ ಸಿಇಒಗಿಂತಲೂ ಹೆಚ್ಚಾ?

Salman Bodygaurd
Published on

ಮುಂಬೈ: ಭಾಯ್​ಗೆ ಬೆದರಿಕೆ ಬಂದಾಗ ನಾನು ಅವರ ಹಿಂದಿರುವುದಿಲ್ಲ. ಬದಲಾಗಿ ಅವರ ಮುಂದೆ ಎದೆಯುಬ್ಬಿಸಿ ನಿಂತಿರುತ್ತೇನೆ ಎಂದು ಬಾಲಿವುಡ್​ ನಟ ಸಲ್ಮಾನ್​ ಖಾನ್​ ಬಾಡಿಗಾರ್ಡ್ ಶೇರಾ ಕೆಲವು ವರ್ಷಗಳ ಹಿಂದೆ ಹೇಳಿದ ಮಾತು ಪ್ರಖ್ಯಾತಿ ಆಗಿತ್ತು. ಸಲ್ಮಾನ್​ ಮತ್ತು ಶೇರಾ ನಡುವೆ ಇರುವ ಸ್ನೇಹತ್ವ ಎಂಥದ್ದು ಎಂಬುದಕ್ಕೆ ಈ ಮಾತು ಸಾಕ್ಷಿಯಾಗಿತ್ತು.

ಶೇರಾ ಅನೇಕ ವರ್ಷಗಳಿಂದ ಸಲ್ಮಾನ್​ ಖಾನ್​ ಬಾಡಿಗಾರ್ಡ್​ ಆಗಿದ್ದಾರೆ. ಇಷ್ಟೇ ಅಲ್ಲದೆ, ಶೇರಾ, ಅನೇಕ ವರ್ಷಗಳಿಂದ ಸೆಕ್ಯುರಿಟಿ ಏಜೆನ್ಸಿ ಸಹ ನಡೆಸುತ್ತಿದ್ದು, ದೇಶ-ವಿದೇಶದ ಹೈಪ್ರೊಫೈಲ್​ ವ್ಯಕ್ತಿಗಳಿಗೆ ಭದ್ರತೆ ನೀಡುತ್ತಾ ಬಂದಿದ್ದಾರೆ.

ಇತ್ತೀಚೆಗೆ ಶೇರಾ ಸಂಬಳದ ಬಗ್ಗೆ ದೊಡ್ಡ ಸುದ್ದಿಯೊಂದು ಕೇಳಿಬಂದಿದೆ. ಅದೇನೆಂದರೆ ಅವರ ಸಂಬಳ ಓರ್ವ ಸಿಇಒ ಸಂಬಳಕ್ಕಿಂತಲೂ ಹೆಚ್ಚೆಂಬುದು. ಶೇರಾ ಒಂದು ತಿಂಗಳಿಗೆ ಬರೋಬ್ಬರಿ 15 ಲಕ್ಷ ರೂ. ಮತ್ತು ವಾರ್ಷಿಕವಾಗಿ 2 ಕೋಟಿ ರೂ. ಪಡೆದುಕೊಳ್ಳುತ್ತಿದ್ದಾರೆಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಸಾಲಾ ಮಾಧ್ಯಮ ಪ್ರತಿಕ್ರಿಯೆ ಪಡೆಯಲು ಹೋದಾಗ ಆರಂಭದಲ್ಲಿ ನಿರಾಕರಿಸಿದ ಶೇರಾ, ನಂತರ ತನ್ನ ಮಾತು ಮುಂದುವರಿಸಿದರು. ಸಾಮಾನ್ಯವಾಗಿ ನಾನು ಯಾರಿಗೂ ಸಂದರ್ಶನಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಅಲ್ಲದೆ, ಇಂತಹ ಲೇಖನಗಳಿಗೆ ಪ್ರತಿಕ್ರಿಯೆಯನ್ನು ನೀಡುವುದಿಲ್ಲ ಎಂದಿದ್ದಾರೆ.

ಇಂತಹ ಸುದ್ದಿ ಸಂಪೂರ್ಣವಾಗಿ ಇನ್ನೊಬ್ಬರ ಕಲ್ಪನಾ ಸುದ್ದಿಯಾಗಿದೆ. ಅನೇಕ ವರ್ಷದಿಂದ ನನ್ನ ಸಂಬಳ ಕುರಿತಾದ ಅನೇಕ ವರದಿಗಳು ಬರುತ್ತಲೇ ಇವೆ. ಇದರಲ್ಲಿ ಹೊಸತೇನೂ ಇಲ್ಲ ಎಂದು ಸದ್ಯ ಅವರ ಸಂಬಳ ಕುರಿತಾದ ವರದಿಯನ್ನು ಅಲ್ಲಗೆಳೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net