

ಪುತ್ತೂರು ಗ್ರಾಮಾಂತರ: ಪುತ್ತೂರಿನಿಂದ ಪರ್ಲಡ್ಕ ಕುಂಜೂರುಪಂಜ ದೇವಸ್ಯ ವಳತ್ತಡ್ಕ ಅಜ್ಜಿಕಲ್ಲು ಮಾರ್ಗವಾಗಿ ಗುಮ್ಮಟಗದ್ದೆಗೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಮಂಗಳವಾರ ಆರಂಭಗೊಂಡಿದ್ದು, ಬೆಳಗ್ಗೆ ಸಂಚಾರ ಆರಂಭಿಸಿದ ಬಸ್ಸು ಅಜ್ಜಿಕಲ್ಲು ತಲುಪಿದಾಗ ಸಾರ್ವಜನಿಕರು ಸ್ವಾಗತಿಸಿ ಸಂಭ್ರಮಿಸಿದರು.
ಕಾಂಗ್ರೆಸ್ ಮುಖಂಡ ಶಶಿಕಿರಣ್ ರೈ ನೂಜಿಬೈಲು ಮಾತನಾಡಿ, ಸುಮಾರು ನಲವತ್ತು ವರ್ಷದ ಈ ಭಾಗದ ಜನರ ಬೇಡಿಕೆ ಇಂದು ಈಡೇರಿದೆ. ಈ ರಸ್ತೆಯಲ್ಲಿ ಕೆಂಪು ಬಸ್ಸನ್ನು ಕಾಣಬೇಕು ಎಂಬ ಪ್ರಯತ್ನ ಹಾಗೂ ಜನರ ಹೋರಾಟದ ಫಲ ಇಂದು ಸಫಲವಾಗಿದೆ. ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಧನ್ಯವಾದ ಅರ್ಪಿಸುತ್ತಿದ್ದೇನೆ ಎಂದರು.
ಕಾಂಗ್ರೆಸ್ ಮುಖಂಡ ಸಂತೋಷ್ ಭಂಡಾರಿ, ವಾರ್ಡ್ ಸಮಿತಿ ಅಧ್ಯಕ್ಷ ಮನೋಜ್ ಗೌಡ ದೇವಸ್ಯ, ಭಗವಾನ್ ದಾಸ್ ರೈ ಚಿಲ್ಮೆತ್ತಾರು, ಶಶಿರಾಜ್ ರೈ, ಲಕ್ಷ್ಮಣ ನಾಯ್ಕ, ಸಂದೀಪ್ ರೈ, ರವಿ, ಪುರಂದರ ನಾಯ್ಕ, ರಾಜೇಶ್ ರೈ, ಮಹಮ್ಮದ್, ಪದ್ಮನಾಭ ಪೂಜಾರಿ, ಈಶ್ವರ ಪ್ರಸನ್ನ ಕೇರಿ, ಧನಂಜಯ ಪೂಜಾರಿ, ಮಮತಾ ರೈ ಮಡಪ್ಪಾಡಿ, ದಿನೇಶ ನಾಯ್ಕ ಮತ್ತಿತರರು ಇದ್ದರು.